'ಟಿ.ಜೆ.ಅಬ್ರಾಹಂ ಕ್ಷಮೆಯಾಚಿಸಬೇಕು'-ಮಧ್ವರಾಜ್22-03-2018

ಉಡುಪಿ: ಉಡುಪಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಸಚಿವ ಪ್ರಮೋದ್‌ ಮಧ್ವರಾಜ್, ಸಿಂಡಿಕೇಟ್ ಬ್ಯಾಂಕ್ ಲೋನ್ ವಿಚಾರದಲ್ಲಿ ಟಿ.ಜೆ.ಅಬ್ರಾಹಂ ನನ್ನ ಮಾನ ಹರಣ ಮಾಡಿದ್ದಾರೆ. ನಾನು ನನ್ನ ವರ್ಚಸ್ಸನ್ನು ಉತ್ತಮ ರೀತಿಯಲ್ಲಿ‌ ಉಳಿಸಿಕೊಂಡಿದ್ದೇನೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾನ ಕಳೆದಿದ್ದಾರೆ. ಆದ್ದರಿಂದ ಹತ್ತು ಕೋಟಿ ರೂಪಾಯಿ ‌ಮಾನನಷ್ಟವನ್ನು ಟಿ.ಜೆ.ಅಬ್ರಾಹಂ ಅವರ ಮೇಲೆ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.

ಅಬ್ರಾಹಂ ನನ್ನ ಮೇಲೆ 193ಕೋಟಿ ಲೋನ್ ಅವ್ಯವಹಾರ ಆರೋಪ ಮಾಡಿದ್ದಾರೆ, ಆದರೆ ನನ್ನ ದಾಖಲೆಗಳು ಸಪರ್ಮಕವಾಗಿವೆ, ಎಲ್ಲಾ ವ್ಯವಹಾರಗಳನ್ನು ಕಾನೂನುಬದ್ಧವಾಗಿ ನಡೆಸುತ್ತಿದ್ದೇನೆ, ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸುತ್ತೇನೆ ಎಂದ ಅವರು, ಮೂರು ದಿನಗಳ ಒಳಗೆ ಟಿ.ಜೆ.ಅಬ್ರಾಹಂ ಅವರು ಪತ್ರಿಕಾಗೋಷ್ಠಿ ಕರೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಅಬ್ರಾಹಂ ಈ ರೀತಿ ಮಾಡುತ್ತಿದ್ದಾರೆ, ಬಿಜೆಪಿಯ ಇಬ್ಬರು ನಾಯಕರು ಇದರ ಹಿಂದಿದ್ದಾರೆ ಎಂದು ದೂರಿದರು. ತಾನೂ ಸಹ ಉಡುಪಿ ಕ್ಷೇತ್ರದ ಆಕಾಂಕ್ಷಿ ಎಂದು ಇದೇ ವೇಳೆ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pramodh Madhvaraj TJ Abraham ವ್ಯವಹಾರ ಆಯೋಗಕ್ಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ