ಸಿಎಂಗೆ ದೇವೇಗೌಡರ ಸವಾಲ್

Deve Gowda

22-03-2018

ಮೈಸೂರು: ಮಾಜಿ ಪ್ರಧಾನಿ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಮೈಸೂರಿನ ಕೆ.ಜಿ ಕೊಪ್ಪಲಿನಲ್ಲಿ ಹತ್ತು ಜನಗಳ ಗರಡಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಮಾತನಾಡುವುದು ಬಹಳಷ್ಟಿದೆ, ಅವರ ಹೇಳಿಕೆ‌ ಕುರಿತಂತೆ ವಿವರವಾಗಿ ಪ್ರತಿಕ್ರಿಯೆ ನೀಡುತ್ತೇನೆ, ಹಾಸನದಲ್ಲಿ ನಿಂತು ದೇವೆಗೌಡರಿಗೆ ವಯಸ್ಸಾಗಿದೆ ಎಂದು ಹೇಳಿದ್ದೀರಿ. ಬನ್ನಿ ಮೈಸೂರಿನಿಂದಲೇ ರಾಜಕೀಯ ಅಖಾಡ ಶುರು ಮಾಡೋಣ, ಎಂದು ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದಾರೆ.

ಸಿದ್ದರಾಮಯ್ಯ ಹಾಸನದಲ್ಲಿ ರೋಷಾವೇಶದ ಭಾಷಣ ಮಾಡಿದ್ದಾರೆ. ಅದಕ್ಕೆಲ್ಲಾ ನಾನು ಉತ್ತರ ಕೊಡುತ್ತೇನೆ. ಸಿದ್ದರಾಮಯ್ಯನವರೇ ಬನ್ನಿ, ಇವತ್ತಿನಿಂದಲೇ ಇಲ್ಲಿಂದಲೇ ರಾಜಕೀಯ ಆಖಾಡ ಶುರುವಾಗಲಿ ಎಂದು ಗುಡುಗಿದ್ದಾರೆ. ಪೈಲ್ವಾನರಿಗೆ ಮಾಸಾಶನ ನೀಡಲು ಹಿಂದೆಯೇ ಚಿಂತನೆ ನಡೆದಿತ್ತು. ಮುಂದೆ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರೆ ಪೈಲ್ವಾನರಿಗೆ ಮಾಸಾಶನ ಕೊಡಿಸುತ್ತೇನೆ ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

H.D.Deve Gowda siddaramaiah ಪೈಲ್ವಾನ ಸವಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ