‘ನಾವು ತೆರೆದ ಪುಸ್ತಕ, ಯಾರ ಭಯವೂ ಇಲ್ಲ’22-03-2018

ಮೈಸೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಜೊತೆ ಫೋನ್ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅದು ಫೋನ್ ಟ್ಯಾಪ್ ಅಲ್ಲ, ನಾವು ತೆರೆದ ಪುಸ್ತಕ, ಯಾವುದನ್ನೂ ಕದ್ದು‌ಮುಚ್ಚಿ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ.

ನಾನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಜೆಡಿಎಸ್ ಸೋಲಿಸಬೇಕೆಂದು ಹೇಳಿರುವೆ, ಬಹಿರಂಗವಾಗಿಯೇ ನಾನು ಮಂಜೇಗೌಡರ ಜೊತೆ ಮಾತನಾಡಿರುವೆ, ನನಗೆ ಯಾರ ಭಯವೂ ಇಲ್ಲ, ಫೋನ್ ಟ್ಯಾಪ್ ಆದರೂ ನಾನು ಕೇರ್ ಮಾಡಲ್ಲ, ನಾನು ನನ್ನ‌ ಕಾರಿನ ಬಳಿ‌ ಹೊರಗೆ ನಿಂತು ನೂರಾರು ಮಂದಿ ಸಮ್ಮುಖದಲ್ಲಿ ಮಾತನಾಡಿರುವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನಾಡ ಅಧಿದೇವತೆ ಚಾಮುಂಡಿ ದರ್ಶನ ಪಡೆಯಲಿದ್ದಾರೆ. ಸುತ್ತೂರು ಮಠಕ್ಕೆ ತೆರಳುವುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು. ರಾಜ್ಯಕ್ಕೆ ಯಾರೇ ಬರಲಿ, ಹೋಗಲಿ ರಾಜ್ಯದ ಜನ ನಮ್ಮ ಜೊತೆ ಇದ್ದಾರೆ ಎಂದು, ರಾಜ್ಯಕ್ಕೆ ಅಮಿತ್ ಷಾ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದರು. ಮಾಜಿ ಸಿಎಂ ಯಡಿಯೂರಪ್ಪ ನಂಜನಗೂಡಲ್ಲಿ ಗೆದ್ದೇ ಗೆಲ್ತೀನಿ ಅಂತಿದ್ದರು, ಜನ ಯಾರ ಕೈ ಹಿಡಿದರೂ ನಿಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ