ಮಗನ ಉದ್ಯೋಗಕ್ಕಾಗಿ ತಾಯಿ ಆತ್ಮಹತ್ಯೆ

Mother commited suicide for her son

22-03-2018

ಬಾಗಲಕೋಟೆ: ತನ್ನ ಮಗನಿಗೆ ಗ್ರಾಮಸೇವಕ ಹುದ್ದೆ ನೀಡದ ಹಿನ್ನೆಲೆ, ಶಾಸಕರ ಮನೆ ಎದುರು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಘಟನೆ ನಡೆದಿದೆ. ಬಾದಾಮಿ ಶಾಸಕ ಬಿಬಿ ಚಿಮ್ಮನಕಟ್ಟಿ ಮನೆ ಮುಂದೆ ಶಾಂತವ್ವ ವಾಲಿಕಾರ(46) ಎಂಬ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತವ್ವನ ಪತಿ ಗೋವಿಂದಪ್ಪ ಮುತ್ತಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸೇವಕನಾಗಿದ್ದು, ಕರ್ತವ್ಯದಲ್ಲಿದ್ದಾಗಲೇ 2ವರ್ಷದ ಹಿಂದೆ ಮೃತಪಟ್ಟಿದ್ದರು. ಮೃತ ಗೋವಿಂದಪ್ಪನ ಮಗ ಶಂಕ್ರಪ್ಪ ವಾಲಿಕಾರಗೆ ಕೆಲಸ ನೀಡಬೇಕೆಂದು ತಾಯಿ ಮನವಿ‌ ಮಾಡಿಕೊಂಡಿದ್ದರು. ಆದರೆ ಶಾಸಕರ ಹೇಳಿಕೆ‌ ಮೇರೆಗೆ ಮತ್ತೊಬ್ಬರಿಗೆ ಗ್ರಾಮಸೇವಕ‌ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿರುವ ಶಾಂತವ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆ ಶಾಸಕ ಚಿಮ್ಮನಕಟ್ಟಿ ಮನೆ ಮುಂದೆ ಸ್ಥಳೀಯರು ಧರಣಿ ನಡೆಸಿ, ಮಹಿಳೆ ಸಾವಿಗೆ ಶಾಸಕರೆ ಕಾರಣ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sucide Job ಸ್ಥಳೀಯರು ಗ್ರಾಮಸೇವಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ