ಬೆಸ್ಕಾಂ ಅಧಿಕಾರಿಗಳು ಮತ್ತು ರೈತರ ಜಟಾಪಟಿ

farmers opposed to install bescom pole in his field..!

22-03-2018

ದೊಡ್ಡಬಳ್ಳಾಪುರ: ವಿದ್ಯುತ್ ಕಂಬ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ರಾಜಾನುಕುಂಟೆ ಬಳಿಯ ಹನಿಯೂರು ಗ್ರಾಮದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ತಾಲ್ಲೂಕಿನ ಅಣ್ಣಯ್ಯಪ್ಪ ಎಂಬುವರ ಜಮೀನಿನಲ್ಲಿ ಬೆಸ್ಕಾಂ ವಿದ್ಯುತ್ ಕಂಬ ಅಳವಡಿಕೆಗೆ ಅಣ್ಣಯ್ಯಪ್ಪ ಮತ್ತು ಸುತ್ತಮುತ್ತಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜಮೀನು ವಿವಾದ ಕೋರ್ಟ್ನಲ್ಲಿ ಇದ್ದರೂ ತೆಂಗು, ಬಾಳೆ ಇತ್ಯಾದಿ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ. ಯಾರಿಗೂ ಮಾಹಿತಿ ನೀಡದೆ ಅಧಿಕಾರಿಗಳು ಏಕಾಏಕಿ ಜಮೀನು ಪ್ರವೇಶ ಮಾಡಿ, ಬೆಳೆದಿದ್ದ ಬೆಳೆ ಹಾಳು ಮಾಡಿದ್ದಾರೆಂದು ರೈತರು ದೂರಿದ್ದಾರೆ. ಫಸಲಿಗೆ ಬಂದಿದ್ದ ಬೆಳೆ ಹಾಗೂ ಅತಿಕ್ರಮ ಪ್ರವೇಶದ ಕುರಿತು ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.


ಸಂಬಂಧಿತ ಟ್ಯಾಗ್ಗಳು

Bescom farmers ಚಕಮಕಿ ಜಮೀನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ