ಹಾವು ಕಚ್ಚಿ ಬಾಲಕ ಸಾವು

A snake killed a boy

22-03-2018

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಎಕಲೂರ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ರಾಹುಲ್ ಸೈದಪ್ಪ(11) ಮೃತ ಬಾಲಕ. ಕೆಲ ದಿನಗಳಿಂದ ಮನೆಯಲ್ಲಿಯೇ ಹಾವು ಅಡಗಿತ್ತು ಎನ್ನಲಾಗಿದ್ದು, ಸೈದಪ್ಪ ಪುಸ್ತಕ ತೆಗೆಕೊಳ್ಳುವಾಗ ಕೈಗೆ ಕಚ್ಚಿದೆ. ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ಓದುತಿದ್ದ ಬಾಲಕ, ಪರೀಕ್ಷೆ ಹಿನ್ನೆಲೆ ಒದುವ ಸಂಬಂಧ, ನಿನ್ನೆ ಸಂಜೆ 6ರ ಸುಮಾರಿಗೆ ಮನೆಯಲ್ಲಿ ತನ್ನ ಜಾಗದಲ್ಲಿಟ್ಟಿದ್ದ ಪುಸ್ತಕ ತಗೆದುಕೊಳ್ಳಲು ಹೋಗಿದ್ದಾನೆ ಈ ವೇಳೆ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

snake death ತರಗತಿ ಪರೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ