'ತೇಜ್ ರಾಜ್ ಒಬ್ಬ ಆರ್.ಟಿ.ಐ ಬ್ಲಾಕ್ ಮೇಲರ್'21-03-2018

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಿ ತೇಜ್ ರಾಜ್ ಶರ್ಮ ಓರ್ವ ಆರ್.ಟಿ.ಐ ಬ್ಲಾಕ್ ಮೇಲರ್ ಎನ್ನುವುದನ್ನು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ.

ಸಂತನಂತೆ ಸೋಗುಹಾಕುವ ತೇಜ್ ರಾಜ್ ಶರ್ಮ, ಆರ್.ಟಿ.ಐ ಅರ್ಜಿಗಳನ್ನು ಸಲ್ಲಿಸಿ ಬ್ಲಾಕ್ ಮೇಲ್ ಮಾಡಿರುವುದನ್ನು ವಿಚಾರಣೆ ಮೂಲಕ ಪತ್ತೆ ಮಾಡಿದ್ದಾರೆ. ತೇಜ್ ರಾಜ್ ಶರ್ಮ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ. ಆದರೆ ಈತ ಕೃಷ್ಣ-ಅರ್ಜುನನ ಕಥೆ ಹೇಳಿ, ಧರ್ಮಯುದ್ಧ ಮಾಡುವುದಾಗಿ ದಾರಿ ತಪ್ಪಿಸುವ ಮಾತುಗಳನ್ನಾಡುತ್ತಿದ್ದಾನೆ. ಆದರೆ ಆತನ ಯೋಚನೆ ಸುಲಿಗೆ ಮಾಡುವುದೇ ಆಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಆತ ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿದ್ದ ಐದು ದೂರುಗಳಲ್ಲಿ ಮೂರು ದೂರುಗಳು ಸಾಕ್ಷ್ಯಾಧಾರಗಳಿರಲಿಲ್ಲ. ಹೀಗಾಗಿ ಅವುಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದರು.

ಆದರೆ ತೇಜ್‍ರಾಜ್‍ಗೆ ಪ್ರಕರಣಗಳು ಇತ್ಯರ್ಥವಾಗುವುದು ಬೇಕಾಗಿರಲಿಲ್ಲ ಯಾಕೆಂದರೆ ಅಧಿಕಾರಿಗಳಿಗೆ, ನೌಕರರಿಗೆ ಲೋಕಾಯುಕ್ತ ಪ್ರಕರಣಗಳನ್ನು ತೋರಿಸಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಇಂಥದ್ದೇ ಹೆದರಿಕೆವೊಡ್ಡಿ ಸಣ್ಣ ಮೊತ್ತದ ಟೆಂಡರ್ಗಳನ್ನು ಪಡೆದುಕೊಂಡು ಕಳಪೆ ಗುಣಮಟ್ಟದ ಪೀಠೋಪಕರಣ ಹಾಗೂ ಇನ್ನಿತರ ವಸ್ತುಗಳನ್ನು ಪೂರೈಸಿ ಸುಲಭವಾಗಿ ಹಣ ಮಾಡುವ ಯೋಚನೆ ಆತನದಾಗಿತ್ತು ಎಂದು ಪೊಲೀಸರು ಹೇಳುತ್ತಿದ್ದಾರೆ.

ಆರ್.ಟಿ.ಐನಲ್ಲಿ ಕೆಲವು ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ. ಕೆಳಹಂತದ ನೌಕರರಿಂದ ಕಚೇರಿಯ ಕೆಳ ಹಂತದ ನೌಕರರಿಗೆ ಲಂಚ ಕೊಟ್ಟು ಎಲ್ಲ ಮಾಹಿತಿ ಪಡೆದುಕೊಂಡು ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತಿದ್ದ. ಲೋಕಾಯುಕ್ತದಲ್ಲಿಯೂ ಆತ ಬಲವಾದ ದಾಖಲೆಗಳನ್ನು ನೀಡುತ್ತಿರಲಿಲ್ಲ. ಈ ರೀತಿ  ಮಾಡಿ ಅಕ್ರಮ ದಾರಿಯಿಂದ ಹಣ ಗಳಿಸುವ ಉದ್ದೇಶ ಆತನದಾಗಿತ್ತು ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ