ಇಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿರೋ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ

Kannada News

11-05-2017

ಐಪಿಎಲ್ ಹತ್ತನೇ ಆವೃತ್ತಿಯ ಪ್ಲೇ ಆಫ್‌ ಪ್ರವೇಶಿಸುವ ಚಿಕ್ಕ ಭರವಸೆ ಹೊಂದಿರುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡ ಇಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ.

 ಮುಂಬೈ ಇಂಡಿಯನ್ಸ್‌ ಗೆ ಈ ಪಂದ್ಯ ಔಪಚಾರಿಕವೆನಿಸಿದರೂ ಕಿಂಗ್ಸ್‌ ತಂಡಕ್ಕೆ ಇದು ಮಹತ್ವದ ಹೋರಾಟ. ಮುಂಬೈ 18 ಪಾಯಿಂಟ್‌ ಗಳನ್ನುಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಕೊಂಡಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಕಿಂಗ್ಸ್ ತಂಡವು ಆರು ಜಯ ಸಾಧಿಸಿ 12 ಅಂಕಗಳನ್ನು ಗಳಿಸಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಬಳಗವು   ತನ್ನ ಪಾಲಿನ ಇನ್ನೂ ಎರಡು ಪಂದ್ಯಗಳಲ್ಲಿ ಗೆಲ್ಲಬೇಕು. ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡವು  ಮೇ 13ರಂದು ಗುಜರಾತ್ ಲಯನ್ಸ್‌ ಎದುರಿನ ಪಂದ್ಯದಲ್ಲಿ ಸೋಲಿಸಿದರೆ ಮಾತ್ರ ಕಿಂಗ್ಸ್ ಫ್ಲೇ ಆಪ್ ಕನಸು ನನಸಾಗುತ್ತೆ..

 ಬ್ಯಾಟಿಂಗ್‌ನಲ್ಲಿ ರೋಹಿತ್ ಶರ್ಮಾ, ನಿತೀಶ್ ರಾಣಾ,  ಪಾರ್ಥಿವ್ ಪಟೇಲ್, ಕೀರನ್ ಪೊಲಾರ್ಡ್, ಲೆಂಡ್ಲ್ ಸಿಮನ್ಸ್ ಬ್ಯಾಟಿಂಗ್ ಬಲವಾದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ,  ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ, ಅನುಭವಿ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಬೌಲಿಂಗ್  ಬಲಿಷ್ಟ ವನ್ನು ಮುಂಬೈ ಹೊಂದಿದೆ..

ಹಾಶೀಮ್ ಆಮ್ಲಾ, ಮನನ್ ವೊಹ್ರಾ, ಶಾನ್ ಮಾರ್ಷ್, ಮಾರ್ಟಿನ್ ಗಪ್ಟಿಲ್ ಮತ್ತು ನಾಯಕ ಮ್ಯಾಕ್ಸ್‌ವೆಲ್ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. 

Links :ಸಂಬಂಧಿತ ಟ್ಯಾಗ್ಗಳು

ಐಪಿಎಲ್ ಐಪಿಎಲ್ ಐಪಿಎಲ್ ಐಪಿಎಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ