ಪರೀಕ್ಷೆಯಲ್ಲಿ ಫೇಲ್: ಮೌಲ್ಯಮಾಪನದ ವಿರುದ್ಧ ಆಕ್ರೋಶ

Student

21-03-2018

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ 231 ವಿದ್ಯಾರ್ಥಿನಿಯರು ಫೇಲ್ ಆಗಿದ್ದು, ಸಮರ್ಪಕವಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿನಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಯಲ್ಲಿ 533 ಮಂದಿ ವಿದ್ಯಾರ್ಥಿನಿಯರು ಮಾತ್ರ ಪಾಸ್ ಆಗಿದ್ದಾರೆ. ಫೇಲ್ ಆಗಿರುವರಲ್ಲಿ ಕೆಲವರು ಮಾತ್ರ ಎಲ್ಲಾ ವಿಷಯಗಳಲ್ಲಿ ಫೇಲ್ ಮಾಡಲಾಗಿದೆ. ಒಂದೊಂದು ವಿಷಯಕ್ಕೆ 1,2,5,6ರಂತೆ ಅತ್ಯಂತ ಕಡಿಮೆ ಅಂಕಗಳು ನೀಡಿದ್ದಾರೆ ಎಂದು ಉಪನ್ಯಾಸಕರ ವಿರುದ್ಧ ವಿದ್ಯಾರ್ಥಿನಿಯರು ಆಕ್ರೋಶಗೊಂಡಿದ್ದು, ಮರುಮೌಲ್ಯಮಾಪನ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಮರುಮೌಲ್ಯ ಮಾಪನಕ್ಕೆ ಕಾಲೇಜಿನ ಉಪನ್ಯಾಸಕರು 500.ರೂ ಪಡೆಯುತ್ತಾರೆ ಎನ್ನಲಾಗಿದ್ದು, ಕಾಲೇಜಿನ ಆಡಳಿತ ಮಂಡಳಿ ನಡೆ ಅನುಮಾನ ಮೂಡಿಸಿದೆ.


ಸಂಬಂಧಿತ ಟ್ಯಾಗ್ಗಳು

college students ಹೊಸಪೇಟೆ ಪದವಿ ಪೂರ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ