ಮದ್ಯಕ್ಕೆ ಬೆಂಕಿ ಇಟ್ಟ ಮಹಿಳೆಯರು

villagers protest against illegal alcohol

21-03-2018

ಗದಗ: ಅಕ್ರಮ ಸಾರಾಯಿ ಮಾರಾಟಕ್ಕೆ ಮಹಿಳೆಯರು ರೋಷಾವೇಶ ತಾಳಿದ್ದಾರೆ. ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದಲ್ಲಿ, ಅಕ್ರಮ ಸಾರಾಯಿ ವಾಹನ ತಡೆದ ಮಹಿಳೆಯರು ಸಾರಾಯಿ ಬಾಟಲಿಗಳನ್ನು ರಸ್ತೆಗೆ ಎಸೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆ ಪಕ್ಕದಲ್ಲೇ ಅಕ್ರಮ ಸಾರಾಯಿ ಮಾರಾಟ ವಾಗುತ್ತಿರುವುದಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಮಹಿಳೆಯರ ಸಿಟ್ಟಿಗೆ ವಾಹನ ಗ್ಲಾಸ್ ಪುಡಿ ಪುಡಿಯಾಗಿದ್ದು, ಚಾಲಕ ಪೊಲೀಸ್ ಠಾಣೆಗೆ ಓಡಿಹೋಗಿದ್ದಾನೆ. ಈ ವೇಳೆ ಪೊಲೀಸ್ ಪೇದೆಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯರು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

illegal alchohol women ಸಾರಾಯಿ ಗ್ರಾಮಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ