‘ಕಾವೇರಿಗಾಗಿ ರಾಜ್ಯ ಸಂಸದರು ಒಗ್ಗಟ್ಟಾಗಬೇಕಿದೆ’21-03-2018

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತ ನಾಳಿನ‌ ಸಭೆಗೆ ಹೋಗುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ. ಕೇಂದ್ರ ಸಚಿವರು‌ ಈ ಸಭೆಯಲ್ಲಿ‌ ಇದ್ದರೆ ಒಳ್ಳೆಯದು, ಏಕೆಂದರೆ ಈಗ ಕಾವೇರಿ ನದಿ ನೀರು ಹಂಚಿಕೆ ವಿಷಯ ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಸಂಸತ್ ಅಧಿವೇಶನ ಇರುವುದರಿಂದ ಬಿಜೆಪಿ ಸಂಸದರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ, ಈಗಾಗಲೇ ನಾನು ಒಂದು‌ ಸ್ಕೀಂ ಮಾಡಿಕೊಟ್ಟಿದ್ದೇನೆ, ತಮಿಳುನಾಡಿನ ಎಲ್ಲಾ ಪಕ್ಷದ ಸಂಸದರು ಒಗ್ಗಟ್ಟಾಗಿದ್ದಾರೆ, ರಾಜ್ಯದ ಸಂಸದರು ಒಗ್ಗಟ್ಟಾಗಬೇಕಿದೆ ಎಂದರು.

ಜೆಡಿಎಸ್ ನ‌ 7ಜನ ಶಾಸಕರ ಅನರ್ಹತೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಸ್ಪೀಕರ್ ಮನಸ್ಸಿನಲ್ಲಿ ಏನಿದೆಯೋ ಎಂದು ನಾನು ಹೇಗೆ ಹೇಳಲಿ, ಆದರೆ ಈ ರೀತಿ ತೀರ್ಪು ತಡ ಮಾಡಬಾರದು, ಸ್ಪೀಕರ್ ಕೋರ್ಟ್ ನಲ್ಲಿ ಏನಾಗುತ್ತದೆ ಕಾದು ನೋಡೋಣ ಎಂದರು. ಮಾತುಕತೆಗೆ ಸಿದ್ದ ಎಂದು ಎಚ್‌.ಸಿ ಬಾಲಕೃಷ್ಣ ಹೇಳಿಕೆಗೆ, ಈಗಾಗಲೇ ಅವರಿಗೆ ಸಾಕಷ್ಟು ಸಮಯವಕಾಶ‌ ಕೊಟ್ಟಿದ್ದೆ, ಅವರನ್ನು ಅಮಾನತ್ತು ಮಾಡಲಾಗಿತ್ತು ಅಷ್ಟೆ, ಉಚ್ಛಾಟಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ, ಮೊದಲು ಸ್ಪೀಕರ್ ಕೋರ್ಟ್ ತೀರ್ಪು ಬರಲಿ ನೋಡೋಣ ಎಂದರು ದೇವೇಗೌಡರು.

ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನನ್ನ ಅಭ್ಯಂತರವಿಲ್ಲ, ಚನ್ನಪಟ್ಟಣದಲ್ಲಿ ಸ್ಪರ್ದಿಸಲು ಸೂಕ್ತ ಅಭ್ಯರ್ಥಿಗಳಿಲ್ಲ, ಅನಿತಾ ಕುಮಾರಸ್ವಾಮಿಯವರು ಸ್ಪರ್ಧೆ ಮಾಡಲ್ಲ ಎಂದು ಹೇಳಿದ ಅವರು, ಕುಮಾರಸ್ವಾಮಿ ಚನಪಟ್ಟಣದಲ್ಲಿ ಸ್ಪರ್ಧಿಸಲು ಪಕ್ಷದಿಂದ ಯಾವುದೇ ತಡೆ ಇಲ್ಲ ನಾನೂ ಈ ಹಿಂದೆ ಸಾತನೂರು ಮತ್ತು ಹೊಳೆನರಸೀಪುರದಿಂದ ಸ್ಪರ್ಧೆ ಮಾಡಿದ್ದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ