‘ಸುಪ್ರೀಂ ಮೊರೆ ಹೋಗಲೂ ಸಿದ್ಧ’21-03-2018

ವಿಜಯಪುರ: ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಮೊನ್ನೆಯಷ್ಟೇ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಂ.ಬಿ.ಪಾಟೀಲ ಅವರು, ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡದೇ ಇದ್ದರೆ, ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ ಎಂದು ಎಚ್ಚರಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸುಪ್ರೀಂ ಕೋರ್ಟ್ ಮೂಲಕವೇ ಸರ್ಟಿಫಿಕೇಟ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 

ಇನ್ನು ಕೆಲ ದಿನಗಳಿಂದ ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮ ಪಡೆದುಕೊಳ್ಳುವ ಹಕ್ಕಿದೆ ಎನ್ನುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಪಾಟೀಲ್ ಅವರು, ಬ್ರಾಹ್ಮಣರು ಬೇಕಾದರೆ ಪ್ರತ್ಯೇಕ ಧರ್ಮ ಪಡೆದುಕೊಳ್ಳಲಿ. ಅವರು ಹಿಂದೂ ಧರ್ಮದಿಂದ ಹೇಗೆ ವಿಭಿನ್ನ ಅನ್ನೋದನ್ನ ಸಾಬೀತು ಪಡಿಸಬೇಕಾಗುತ್ತದೆ. ಬ್ರಾಹ್ಮಣರು ಸಾಬೀತುಪಡಿಸಿದಲ್ಲಿ ಅವರಿಗೆ ಪ್ರತ್ಯೇಕ ಧರ್ಮ‌ ಮಾನ್ಯತೆ ನೀವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.


ಸಂಬಂಧಿತ ಟ್ಯಾಗ್ಗಳು

M. B. Patil lingayat ಪ್ರತ್ಯೇಕ ಧರ್ಮ‌ ಜೈನರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ