ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರ್ಪಡೆ

AS Patil Nadahalli joined the BJP

21-03-2018

ಬೆಂಗಳೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾಗಿ ಕಳೆದ 2ವರ್ಷಗಳಿಂದ ಜಾತ್ಯತೀತ ಜನತಾದಳದೊಂದಿಗೆ ಗುರುತಿಸಿಕೊಂಡಿದ್ದ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಈಗ ಮತ್ತೊಂದು ಪಕ್ಷಾಂತರ ನಡೆಸಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ ನಿಂದ ಆಯ್ಕೆಯಾಗಿ ಜೆಡಿಎಸ್ ಜೊತೆಗೆ ಗುರುತಿಸಿಕೊಂಡು ಈಗ ಚುನಾವಣೆ ವೇಳೆಗೆ ಎ.ಎಸ್.ಪಾಟೀಲ ಬಿಜೆಪಿಗೆ ಜಂಪ್ ಮಾಡಿದ್ದಾರೆ. 2013ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಎ.ಎಸ್.ಪಾಟೀಲ ನಡಹಳ್ಳಿ, ಪಕ್ಷದ ನಾಯಕರ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದರು. ಅದಕ್ಕಾಗಿ ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟಿಸಲಾಗಿತ್ತು. ನಂತರ ಪಾಟೀಲ ಎಚ್.ಡಿ.ಕುಮಾರ ಸ್ವಾಮಿ ಅವರ ನಾಯಕತ್ವ ಒಪ್ಪಿ ಜೆಡಿಎಸ್ ನೊಂದಿಗೆ ಗುರುತಿಸಿಕೊಂಡಿದ್ದರು.

ಈಗ ನಡಹಳ್ಳಿ, ಕುಮಾರಸ್ವಾಮಿ ವಿರುದ್ಧವೂ ಅಸಮಾಧಾನಗೊಂಡಿದ್ದಾರೆ. ಮಾರ್ಚ್ 23ರ ರಾಜ್ಯಸಭೆ ಚುನಾವಣಾ ನಂತರ ಯಾವ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧೆ ಎನ್ನುವುದನ್ನು ಸ್ಪಷ್ಟ ಪಡಿಸುವುದಾಗಿ ಹೇಳಿದ್ದ ನಡಹಳ್ಳಿ ಅದಕ್ಕೆ ಮುನ್ನವೇ ಬಿಜೆಪಿ ಸೇರಿದ್ದಾರೆ.

ತಾವು ಮುದ್ದೇಬಿಹಾಳದಿಂದ ಸ್ಪರ್ಧೆಗಿಳಿಯುವುದು ಕುಮಾರ ಸ್ವಾಮಿ ಅವರಿಗೆ ತಮ್ಮ ದೇವರ ಹಿಪ್ಪರಗಿ ಕ್ಷೇತ್ರವನ್ನು ಬಿಟ್ಟು ಕೊಡುವುದು ಪಾಟೀಲರ ಲೆಕ್ಕಾಚಾರ ವಾಗಿತ್ತು. ಆದರೆ, ಎಚ್.ಡಿ.ದೇವೇಗೌಡರ ಒತ್ತಡದ ಮೇರೆಗೆ ಕುಮಾರ ಸ್ವಾಮಿ ರಾಮನಗರದಿಂದ ಮಾತ್ರ ಕಣಕ್ಕಿಳಿಯಲು ನಿರ್ಧರಿಸಿದ್ದರು. ಇದೇ ಅವಕಾಶವನ್ನು ಬಳಸಿಕೊಂಡು ನಡಹಳ್ಳಿ ತಮ್ಮ ಪತ್ನಿ ಮಹಾದೇವಿ ಅವರಿಗೆ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ ಟಿಕೆಟ್ ಬಯಸಿದ್ದರು.

ಪಾಟೀಲರ ಲೆಕ್ಕಾಚಾರ, ಹೀಗಿದ್ದಾಗ ಕುಮಾರ ಸ್ವಾಮಿ ದಿಢೀರನೆ ತಮ್ಮನ್ನು ಕೇಳದೆ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರಕ್ಕೆ ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿರುವುದು ಎ.ಎಸ್. ಪಾಟೀಲ ನಡಹಳ್ಳಿ ಅವರ ಅಸಮಧಾನಕ್ಕೆ ಕಾರಣವಾಗಿತ್ತು.


ಸಂಬಂಧಿತ ಟ್ಯಾಗ್ಗಳು

nadahalli patil BJP ಯಡಿಯೂರಪ್ಪ ನಾಯಕತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ