ಆರು ಮಂದಿ ಜೂಜುಕೋರರ ಬಂಧನ

gamblers arrested in devanahalli: police seized cash,bikes, mobile etc

21-03-2018

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಹೊರವಲಯದಲ್ಲಿ ಜುಜೂ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಆರು‌ ಜನರನ್ನು ಬಂಧಿಸಿ, 2 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ ಮತ್ತವರ ತಂಡ. ಕಾರಹಳ್ಳಿ ಮತ್ತು ತೈಲಗೇರೆ ಮೂಲದ ಮನು, ಜಯಚಂದ್ರ, ಮುನಿರಾಜು, ನಾಗೇಶ್, ಸುರೇಶ್ ಮತ್ತು ಜ್ಯೂವೆಲರಿ ಶಾಪ್ ಮಾಲೀಕ ಮಂಜುನಾಥ್ ರನ್ನು ಬಂಧಿಸಿದ್ದಾರೆ. 9 ದ್ವಿಚಕ್ರ ವಾಹನ, 6 ಮೊಬೈಲ್ ಸೇರಿದಂತೆ ನಗದು ಹಣ ವಶಕ್ಕೆ ಪಡೆದಿರುವ ಪೊಲೀಸರು, ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gambling Devanahalli ಜುಜೂ ಅಡ್ಡೆ ಪಿಎಸ್ಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ