ಬೆಳಗಾವಿ ವಿಭಜನೆ: ಎಷ್ಟು ಹೊಸ ಜಿಲ್ಲೆ ಬೇಕು?

belagavi divide: demands and opposes..!

21-03-2018

ಬೆಂಗಳೂರು: ಬೆಳಗಾವಿ ಜಿಲ್ಲೆಯನ್ನು ವಿಭಜಿಸ ಬೇಕೇ? ಹಾಗಿದ್ದರೇ ಎಷ್ಟು ಹೊಸ ಜಿಲ್ಲೆಗಳನ್ನು ರಚಿಸಬೇಕು? ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವಂತೆ ಗಡಿ ಭಾಗದಲ್ಲಿ ಜೋರಾಗಿ ಕೇಳಿಬರುತ್ತಿರುವ ಪ್ರಶ್ನೆ ಇದು. ಆದರೆ ಕನ್ನಡ ಪರ ಹೋರಾಟಗಾರರಿಂದ ಜಿಲ್ಲೆ ವಿಭಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಳಗಾವಿ ಪ್ರದೇಶ ವಿವಾದದಲ್ಲಿದೆ. ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ವಿಭಜನೆಗೆ ಮುಂದಾಗುವುದು ಎಷ್ಟು ಸರಿ ಎನ್ನುವುದು ಕನ್ನಡಪರ ಹೋರಾಟಗಾರರ ಪ್ರತಿವಾದ.

ಬೆಳಗಾವಿ ದೊಡ್ಡ ಜಿಲ್ಲೆ, 18 ವಿಧಾನ ಸಭಾ ಕ್ಷೇತ್ರಗಳು, 2 ಲೋಕಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಆಡಳಿತ್ಮಾಕ ಕಾರಣಗಳಿಗಾಗಿ ಜಿಲ್ಲೆಯನ್ನು ವಿಭಜಿಸುವುದು ಅನಿವಾರ್ಯ ಎನ್ನುವುದು ವಿಭಜನೆ ಪರ ಇರುವವರ ವಾದ.

ಲೋಕಸಭಾ ಸದಸ್ಯ ಪ್ರಕಾಶ್ ಹುಕ್ಕೇರಿ, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಿಂದ ಚಿಕ್ಕೋಡಿ ಪ್ರದೇಶವನ್ನು ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆ ಸೃಷ್ಟಿಸುವಂತೆ ಆಗ್ರಹಿಸುತ್ತಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಗೋಕಾಕ ಪ್ರತ್ಯೇಕ ಜಿಲ್ಲೆ ಆಗಬೇಕೆನ್ನುತ್ತಾರೆ. ಇನ್ನೂ ಬೈಲಹೊಂಗಲದ ಜನ ನಮ್ಮದು ಈಗಾಗಲೇ ಉಪವಿಭಾಗ, ಬೈಲಹೊಂಗಲವೂ ಪ್ರತ್ಯೇಕ ಜಿಲ್ಲೆ ಆಗಲಿ ಎಂದು ಒತ್ತಡ ಹೇರುತ್ತಿದ್ದಾರೆ. ಈ ಒತ್ತಡ ತಂಡಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿವೆ. ಮುಖ್ಯ ಮಂತ್ರಿಗಳು ಜಿಲ್ಲೆಯ ಮುಖಂಡರ ಸಭೆಯನ್ನೂ ನಡೆಸಿದ್ದಾರೆ.

ಬೆಳಗಾವಿ ಕನ್ನಡಪರ ಹೋರಾಟಗಾರರದು ವಿಭಿನ್ನ ನಿಲುವು. ಬೆಳಗಾವಿ ಪ್ರದೇಶ ಈಗಾಗಲೇ ವಿವಾದದಲ್ಲಿದೆ. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿರುವಾಗ ವಿಭಜನೆ ಮಾತು ಒಳ್ಳೆಯದಲ್ಲ. ಪ್ರತ್ಯೇಕ ಜಿಲ್ಲೆಯ ಹೋರಾಟ ಕೆಟ್ಟ ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿರೋಧ ವ್ಯಕ್ತಪಡಿಸುತಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತ್ಯೇಕ ಜಿಲ್ಲೆಯ ಹೋರಾಟಗಳು ಜಿಲ್ಲೆಯ ಜನರಿಗೆ ಹೊಸದೇನಲ್ಲ. ಈಗ ಪ್ರತ್ಯೇಕ ಜಿಲ್ಲೆಯ ಬೇಡಿಕೆಯ ಚೆಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದೆ. ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಚಾಣಕ್ಯ ರಾಜಕೀಯ ದಾಳಗಳನ್ನು ಉರುಳಿಸುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಜಿಲ್ಲೆ ಬೇಡಿಕೆಗಳನ್ನು ಹೇಗೆ ನಿಭಾಯಿಸುವರು? ಇದು ಸದ್ಯ ಇರುವ ಕುತೂಹಲ.


ಸಂಬಂಧಿತ ಟ್ಯಾಗ್ಗಳು

Chikodi Gokak ಪ್ರತ್ಯೇಕ ಜಿಲ್ಲೆ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ