ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.. ಈ ಬಾರಿಯೂ ಬಾಲಕಿಯರ ಮೇಲುಗೈ

Kannada News

11-05-2017

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಗಿಂತ ಫಲಿತಾಂಶ ಕಡಿಮೆ ಬಂದಿದ್ದು ಉಡುಪಿಗೆ ಮೊದಲ ಸ್ಥಾನ ಬೀದರ್ ಕಡೆಯ ಸ್ಥಾನ ಪಡೆದುಕೊಂಡಿದೆ.ಆದರೆ ಟಾಪರ್ ಲಿಸ್ಟ್ ಅನ್ನು ಪ್ರಕಟಿಸಿಲ್ಲ. ಪದವಿಪೂರ್ವ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀತ್ ಸೇಟ್ ಫಲಿತಾಂಶ ಪ್ರಕಟಿಸಿದರು.

ಈ ಬಾರಿ ಶೇ.52.38 ಫಲಿತಾಂಶ ಬಂದಿದ್ದು ಕಳೆದ ಬಾರಿ ಶೇ.5 ರಷ್ಟು ಕಡಿಮೆ ಬಂದಿದೆ. ಒಟ್ಟು ಪರೀಕ್ಷೆ ಬರೆದ 679061 ವಿದ್ಯಾರ್ಥಿಗಳಲ್ಲಿ 355697 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.35.05, ವಾಣಿಜ್ಯ ವಿಭಾಗದಲ್ಲಿ ಶೇ 60.09, ವಿಜ್ಞಾನ ವಿಭಾಗದಲ್ಲಿ ಶೇ.60.71 ರಷ್ಟು ಫಲಿತಾಂಶ ಬಂದಿದೆ.

ಶೇ.85ಕ್ಕಿಂತ ಹೆಚ್ಚು 45983, ಶೇ.60ಕ್ಕಿಂತ ಹೆಚ್ಚು 192012, ಶೇ.60 ಕ್ಕಿಂತ ಕಡಿಮೆ 46005 ವಿದ್ಯಾರ್ಥಿಗಳ ಸ್ಥಾನ ಪಡೆದುಕೊಂಡಿದ್ದಾರೆ.


ಶೂನ್ಯ ಸಾಧನೆ:
ಸರ್ಕಾರಿ ಪದವಿ ಪೂರ್ವ ಕಾಲೇಜು 03
ಅನುದಾನಿತ ಪದವಿ ಪೂರ್ವ ಕಾಲೇಜು 01
ಅನುದಾನರಹಿತ ಪದವಿಪೂರ್ವ ಕಾಲೇಜು 127
ವಿಭಜಿತ ಪದವಪೂರ್ವ ಕಾಲೇಜು 01

ಒಟ್ಟು 132 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

ಟಾಪರ್ ಲಿಸ್ಟ್ ಇಲ್ಲ:

ಈ ಬಾರಿ ಟಾಪ್ ಲಿಸ್ಟ್ ಅನ್ನು ಪ್ರಕಟಿಸುತ್ತಿಲ್ಲ ಎಂದು ಸಚಿವ ತನ್ವೀರ್ ಸೇಟ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಆದೇಶದ ಪ್ರಕಾರ ಪಟ್ಟಿಯನ್ನು ಪ್ರಕಟಿಸಿಲ್ಲ, ಕೇವಲ ಜಿಲ್ಲಾವಾರು ಫಲಿತಾಂಶ ನೀಡುತ್ತಿದ್ದೇವೆ, ಖಾಸಗಿ ಕಾಲೇಜುಗಳು ಟಾಪರ್ ಲಿಸ್ಟ್ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ