ರಮ್ಯ ತಾಯಿ ರಂಜಿತಾ ಚುನಾವಣಾ ಕಣಕ್ಕೆ?

kannada actress ramya

20-03-2018

ಬೆಂಗಳೂರು: ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ಕನ್ನಡದ ಖ್ಯಾತ ಚಲನಚಿತ್ರ ನಟಿ ಮೋಹಕ ತಾರೆ ರಮ್ಯ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾಯಿತು. ಈಗ ಚುನಾವಣಾ ಸ್ಪರ್ಧೆಯ ಸರದಿ ಅವರ ತಾಯಿ ರಂಜಿತಾ ಅವರದು.

ರಮ್ಯ ತಾಯಿ ರಂಜಿತಾ ಮಂಡ್ಯ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ಧಿಸ ಬಯಸಿದ್ದಾರೆ. ಅದಕ್ಕಾಗಿ ಪೂರ್ವಭಾವಿ ಸಿದ್ದತೆಗಳನ್ನು ಆರಂಭಿಸಿದ್ದಾರೆ. ಮಗಳು ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ಇರಬಹುದು ಆದರೆ, ಅವರ ತಾಯಿ ರಮ್ಯ ಪ್ರಭಾವ ಬಳಸದೇ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ತಾವು ಅಂಬರೀಶ್ ವಿರೋಧಿಗಳಲ್ಲ ಎಂದೂ ಹೇಳುತ್ತಲೇ ರಂಜಿತಾ ಅಂಬರೀಶ್ ವಿರುದ್ಧ ಚುನಾವಣಾ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಗಳು ರಮ್ಯ ಸೋಲು, ಅದಕ್ಕೆ ಪಕ್ಕದ ಮುಖಂಡರ ಅಸಹಕಾರ ರಂಜಿತಾ ಅವರ ಸ್ಪರ್ಧೆಯ ಹಿಂದೆ ಇವೆ.

ಅವರು ಈಗೇನೊ ಸ್ಪರ್ಧೆಯ ಬಗ್ಗೆ ಮಾತನಾಡುತ್ತಿದ್ದಾರೆ, ಮಗಳು ರಮ್ಯ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಹುದ್ದೆ ಹೊಂದಿರುವ ಹಿನ್ನೆಲೆಯಲ್ಲಿ ತಾಯಿ ರಂಜಿತಾ ಅಂತಿಮವಾಗಿ ಚುನಾವಣಾ ಕಣಕ್ಕಿಳಿಯುವರೋ ಇಲ್ಲ ಅವರದು ಕೇವಲ ರಾಜಕೀಯ ದಾಳವೊ ಅದನ್ನು ಮುಂದಿನ ದಿನಗಳು ಹೇಳಲಿವೆ.


ಸಂಬಂಧಿತ ಟ್ಯಾಗ್ಗಳು

Ramya Lok Sabha ರಾಜಕೀಯ ರಂಜಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ