ಕಾಂಗ್ರೆಸ್ ಬಗ್ಗೆ ಹಿಂದೂಗಳ ಮುನಿಸು

Govt released lakhs of rupees for shadi mahals in kodagu

20-03-2018

ಈಗಾಗಲೇ ಟಿಪ್ಪು ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಮುನಿಸು ಇಟ್ಟುಕೊಂಡಿರುವ ಕೊಡಗಿನ ಪ್ರಮುಖ ಸಮುದಾಯಗಳಾದ ಕೊಡವರು ಮತ್ತು ಒಕ್ಕಲಿಗರು ಈಗ ಕಾಂಗ್ರೆಸ್ ಸರ್ಕಾರದ ಇನ್ನೊಂದು ತುಷ್ಟೀಕರಣದ ಪ್ರಕರಣದ ಕಾರಣದಿಂದಾಗಿ ಸಿದ್ದರಾಮಯ್ಯ ಸರ್ಕಾರವನ್ನು ಹಿಂದೂ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಿ ನೋಡಲು ಆರಂಭಿಸಿರುವುದು ಕೊಡಗಿನ ಜಿಲ್ಲಾ ಕಾಂಗ್ರೆಸ್ಸಿಗೆ ಇರಿಸು ಮುರಿಸು ಉಂಟುಮಾಡಿದೆ.

ಶಾದಿ ಮಹಲ್‍ಗಳಿಗೆ ಸಹಾಯಧನ ನೀಡುವ ನೆಪದಲ್ಲಿ ಕೊಡಗಿನ 17 ಮಸೀದಿಗಳಿಗೆ ತಲಾ 9ರಿಂದ30 ಲಕ್ಷದಷ್ಟು ಎಂದರೆ ಒಟ್ಟು ಸುಮಾರು ಮೂರೂವರೆ ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಿರುವುದು ಕೊಡಗಿನ ಅನೇಕ ಹಿಂದೂಗಳ ಕೆಂಗಣ್ಣಿಗೆ ಕಾರಣವಾಗಿದೆ. ಕೆಲವೊಂದು ಕಡೆ ಬರೀ 5-6 ಕಿಲೋ ಮೀಟರ್ ಅಂತರದಲ್ಲಿರುವ ಮಸೀದಿಗಳಿಗೂ ಪ್ರತ್ಯೇಕವಾಗಿ ಹಣ ಬಿಡುಗಡೆ ಮಾಡಿರುವುದು ಅನೇಕರಿಗೆ ಸಿಟ್ಟುತರಿಸಿದೆ. ಹಣ ಪಡೆಯಲಿರುವ ಮಸೀದಿಗಳ ಪೈಕಿ ಕೆಲವು ಮಸೀದಿಗಳು ಅಕ್ರಮವಾಗಿ ಕಟ್ಟಲ್ಪಟ್ಟವು ಎಂದು ಜನ ಹೇಳುತ್ತಿದ್ದಾರೆ. ಕೊಡಗಿನಲ್ಲಿ ಈಗಾಗಲೇ ಅನೇಕ ಪುರಾಣ ಪ್ರಸಿದ್ಧ ದೇವಸ್ಥಾನಗಳು ಶಿಥಿಲಾವಸ್ಥೆಯನ್ನು ತಲುಪಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಓಲೈಕೆಯಾಗುತ್ತಿರುವುದು ಮತ್ತೊಮ್ಮೆ ಕೊಡಗನ್ನು ಬಿಜೆಪಿ ತೆಕ್ಕೆಗೆ ಹಾಕುವುದರಲ್ಲಿ ಅನುಮಾನವಿಲ್ಲವೆಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Muslim shaadi maha ಟಿಪ್ಪು ಜಯಂತಿ ಸಹಾಯಧನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ