ನಟಿ ಚೈತ್ರಾಗೆ ವಿಲನ್ ಆದ ಗಂಡ

kannada actress chaitra registered complaint against his husband

20-03-2018

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಚೈತ್ರಾ ಪೋತರಾಜ್ ಸಂಸಾರದಲ್ಲಿ ಬಿರುಕು ಮೂಡಿದ್ದು, ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇದೀಗ ವಿಚ್ಛೇದನಕ್ಕೆ ತಯಾರಿ ನಡೆಸುತ್ತಿದ್ದಾರೆ. ಚೈತ್ರಾಗೆ ರಿಯಲ್ ಎಸ್ಟೇಟ್ ಉದ್ಯಮಿಯಾದ ಬಾಲಾಜಿ ಪೋತರಾಜ್ ಅವರ ಪರಿಚಯವಾಗಿ, ಡಿಸೆಂಬರ್ 12, 2006ರಂದು ಮೈಸೂರಿನ ಚಾಮುಂಡೇಶ್ವರಿ ಸ್ಟೇಡಿಯಂನಲ್ಲಿ  ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಚೈತ್ರಾ ಸಿನಿಮಾ ನಟಿಯಾಗಿದ್ದರಿಂದ ಪತಿ ಬಾಲಾಜಿ ತನ್ನ ಮೇಲೆ ಅನುಮಾನ ಪಡುತ್ತಿದ್ದರು. ಎಲ್ಲಿಗೆ ಹೋದರೂ ಜೊತೆಗೆ ಗನ್ ಮ್ಯಾನ್ ನನ್ನ ಕಳುಹಿಸುತ್ತಿದ್ದರು ಎಂದು ಚೈತ್ರಾ ಆರೋಪಿಸಿದ್ದಾರೆ.

ಮದುವೆಯ ನಂತರ ಬಾಲಾಜಿ ನನಗೆ ಪ್ರತಿದಿನ ಹೊಡೆದು, ಬೈದು ಚಿಕ್ಕಪುಟ್ಟ ವಿಷಯಗಳಿಗೆ ಕಿರುಕುಳ ನೀಡುತ್ತಿದ್ದರು. ನನಗೆ ಎರಡನೇ ಮಗುವಾದ ನಂತರ ನಾನು ಅವರ ಜೊತೆ ಯಾವುದೇ ದೈಹಿಕ ಸಂಪರ್ಕವನ್ನು ಬೆಳೆಸಿಕೊಂಡಿಲ್ಲ. ಬಾಲಾಜಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೇ ನಾನು ತವರು ಮನೆಗೆ ಹೋಗಬೇಕೆಂದರೆ ಅವರು ನನ್ನ ಜೊತೆ ಗನ್‍ಮ್ಯಾನ್ ಕಳುಹಿಸುತ್ತಿದ್ದರು. ನನ್ನ ಖರ್ಚಿಗೆ ಹಣ ಕೇಳಿದರೆ ಬಾಲಾಜಿ ನನ್ನನ್ನು ಹೊಡೆದು ಅಮಾನವೀಯವಾಗಿ ವರ್ತಿಸುತ್ತಿದ್ದರು ಎಂದು ನಟಿ ಚೈತ್ರಾ ದೂರಿನಲ್ಲಿ ತಿಳಿಸಿದ್ದಾರೆ.

ಸಿನಿಮಾಗಳಲ್ಲಿ ನಾನು ನಟಿಸಬಾರದು ಎಂದು ಹೇಳಿದ್ದರಿಂದ ನನ್ನ ತವರು ಮನೆಯವರ ಸಹಾಯದಿಂದ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಆದರೆ ಧಾರವಾಹಿಯಿಂದ ಬಂದ ಹಣವನ್ನು ಕೂಡ ಬಾಲಾಜಿ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ನಾನು ಬಾಲಾಜಿ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ನಮ್ಮಿಬ್ಬರ ನಡುವೆ ಗಲಾಟೆ ಆಗಿದ್ದು, ಆಗ ಬಾಲಾಜಿ ನನ್ನ ತಲೆಯನ್ನು ಕಾರಿನ ಕಿಟಕಿಗೆ ಡಿಕ್ಕಿ ಹೊಡೆಸಿದ್ದರು. ಆಗ ನನ್ನ ತಲೆ ಬುರುಡೆ ತೆರೆದುಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ ಎಂದು ಚೈತ್ರಾ ಹೇಳಿದ್ದಾರೆ.

ನಂತರ ಮತ್ತೆ ಮಾರ್ಚ್ 14ರಂದು ಚಿಕ್ಕ ವಿಷಯಕ್ಕೆ ಜಗಳ ತೆಗೆದು ಮುಖಕ್ಕೆ ಹೊಡೆದು ತಲೆ ಕೂದಲನ್ನು ಹಿಡಿದು ಗೋಡೆಗೆ ಡಿಕ್ಕಿ ಹೊಡೆಸಿದ್ದರು. ಆ ಹೊಡೆತದಿಂದ ನನ್ನ ಮೂಗು ಮತ್ತು ಬಾಯಿಂದ ರಕ್ತ ಬಂದು ಎಡಗಣ್ಣಿನ ಕೆಳಗೆ ಗಾಯವಾಯಿತು. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಹಿಡಿದು ಹೊಟ್ಟೆಯ ಭಾಗಕ್ಕೆ ಹೊಡೆದಿದ್ದಾರೆ. ನಾನು ಪ್ರಜ್ಞೆ ತಪ್ಪಿದ್ದರೂ ಚಿಕಿತ್ಸೆ ಕೊಡಿಸದೇ ಬಾಲಾಜಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಚೈತ್ರಾ ದೂರಿದ್ದಾರೆ.

ಬಾಲಾಜಿ ಅಮೂಲ್ಯ ಎಂಬ ಹುಡುಗಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನನ್ನನ್ನು ಮನೆಯಿಂದ ಹೊರಹಾಕುವ ಉದ್ದೇಶದಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಸದ್ಯ ನಾನು ಈಗ ತವರು ಮನೆಯಲ್ಲಿದ್ದು, ಬಾಲಾಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚೈತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತಿಯ ವಿರುದ್ಧ ಚೈತ್ರಾ ಅವರು ನೀಡಿರುವ ದೂರು ದಾಖಲಿಸಿರುವ ಬಸವನಗುಡಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chiatharat potraj divorce ಮಾನಸಿಕ ಕಿರುಕುಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ