ಯುವತಿ ಅಪಹರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ20-03-2018

ಬೆಂಗಳೂರು: ಕಾರಿನಲ್ಲಿ ಬಂದು ಮೂವರು ದುಷ್ಕರ್ಮಿಗಳು ಯುವತಿಯೊಬ್ಬಳನ್ನು ಅಪಹರಿಸಿ ಹಲ್ಲೆ ನಡೆಸಿ ಕಾರಿನ ಸೀಟಿನಡಿ ತಳ್ಳಿ ಹಿಂಸಿಸಿ ಬೆದರಿಸಿ ಬಿಟ್ಟು ಹೋಗಿರುವ ದುರ್ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ. ಕಸವನಹಳ್ಳಿ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸುಮಾರು 26 ವರ್ಷ ವಯಸ್ಸಿನ ಯುವತಿಯನ್ನು ತಮಿಳುನಾಡು ನೊಂದಣಿಯ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಪಹರಿಸಿ ಕರೆದೊಯ್ದು ಹಲ್ಲೆ ನಡೆಸಿ ಕಾರಿನ ಸೀಟಿನ ನೂಕಿ ಹಿಂಸಿಸಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾರೆ.

ಯುವತಿಯು ಪ್ರತಿರೋಧ ತೋರಿದ್ದರಿಂದ ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದು ಅಸ್ವಸ್ಥಗೊಂಡ ಯುವತಿಯು ಇಂದು ಬೆಳಿಗ್ಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದ ಬೆಳ್ಳಂದೂರು ಪೊಲೀಸರು ಆಸ್ಪತ್ರೆಗೆ ಧಾವಿಸಿ ಯುವತಿಯಿಂದ ಮಾಹಿತಿ ಪಡೆದಿದ್ದು, ಯುವತಿಯು ಕೃತ್ಯದ ಬಗ್ಗೆ ಅಸ್ಪಷ್ಟ ಮಾಹಿತಿ ನೀಡುತ್ತಿದ್ದು ನನ್ನನ್ನು ಕರೆದೊಯ್ದ ದುಷ್ಕರ್ಮಿಗಳು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರು ನಾನು ಪ್ರತಿರೋಧ ತೋರಿ ತಪ್ಪಿಸಿಕೊಂಡು ಬಂದೆ ನನ್ನ ಮೇಲೆ ಹಲ್ಲೆ ಕೂಡ ನಡೆಸಿಲ್ಲ ನಿಮಗೆ ಯಾರೂ ಮಾಹಿತಿ ನೀಡಿದರೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಅಪಹರಣ ಪ್ರಕರಣ ದಾಖಲಿಸಿರುವ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಗಳಿಗಾಗಿ ಬಲೆ ಬೀಸಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

abduct women ಮೊಬೈಲ್ ದುಷ್ಕರ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ