‘ಬಿಜೆಪಿ ಅವಧಿಯಲ್ಲಿ ಬೆಂಗಳೂರು ಹದಗೆಟ್ಟಿತ್ತು’-ಜಾರ್ಜ್

Bangalore is worse during BJP

20-03-2018

ಬೆಂಗಳೂರು: ಬೆಂಗಳೂರು ಬ್ರಾಂಡ್ ಜನಪ್ರಿಯವಾಗಿದೆ, ಬಿಬಿಎಂಪಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು 'ಬೆಂಗಳೂರು ರಕ್ಷಿಸಿ'ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಹಳೆಯ ವಿಷಯಗಳನ್ನು ಮರೆತಿದ್ದಾರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರ ಕೊಟ್ಟ ಹಣದಲ್ಲೇ ಬೆಂಗಳೂರಲ್ಲಿ ಅಭಿವೃದ್ಧಿ ಕೆಲಸ ಆಗಿದ್ದು ಎಂದರು.

ಬಿಜೆಪಿ ಅವಧಿಯಲ್ಲಿ ಬೆಂಗಳೂರು ಹದಗೆಟ್ಟಿತ್ತು, ಮಳೆಯ ಅನಾಹುತಕ್ಕೆ ಕಾರ್ಯಕ್ರಮ ತರಲಿಲ್ಲ, ರಸ್ತೆ ಸಮಸ್ಯೆ ಪರಿಹರಿಸುವ ಕೆಲಸ ಮಾಡಿರಲಿಲ್ಲ, ಮಂಡೂರಿನಲ್ಲಿ ಕಸ ಗುಡ್ಡೆ ಹಾಕಿದ್ದೇ ಬಿಜೆಪಿಯವರ ಸಾಧನೆ ಎಂದು ಲೇವಡಿ ಮಾಡಿದ್ದಾರೆ.

ವಿದೇಶಿ ಪತ್ರಿಕೆಗಳಲ್ಲಿ ಕಸದ ಸಮಸ್ಯೆ ಹೈಲೈಟ್ ಆಗಿತ್ತು, ನಾವು ಬಂದ ನಂತರ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದೇವೆ. ಪೌರಕಾರ್ಮಿಕರಿಗೆ ಐದಾರು ಸಾವಿರ ವೇತನ ನೀಡಲಾಗುತ್ತಿತ್ತು, ಕಸ ಗುತ್ತಿಗೆದಾರರ ಮಾಫಿಯಾ ಆಗಿತ್ತು, ಆ ಮಾಫಿಯಾ ತಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ, ಆದರೆ ಇದಕ್ಕೆಲ್ಲಾ ಬ್ರೇಕ್ ಹಾಕಿದ್ದು ನಮ್ಮ ಸಿಎಂ. ಪೌರಕಾರ್ಮಿಕರಿಗೆ ಗರಿಷ್ಠ ವೇತನ, ತ್ಯಾಜ್ಯ ಸಂಸ್ಕರಣೆ ಇತರೆ ಯೋಜನೆಗಳನ್ನು ತಂದು ಕಸದ ಸಮಸ್ಯೆಗೆ ಬ್ರೇಕ್ ಹಾಕಿದ್ದು ನಾವು ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ನಾವು ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೀವಿ, ಕೆರೆಗಳ ಸಂರಕ್ಷಣೆ ನಮ್ಮ ಆಡಳಿತದಲ್ಲಿ ನಡೆದಿದೆ. ಅಂರ್ತಜಲ ವ್ಯವಸ್ಥೆ ಕಲುಷಿತವಾಗದಂತೆ ಕಾಪಾಡಲು ಪ್ರಯತ್ನ ಮಾಡಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

K.J.George Development ಪ್ರಧಾನಿ ಅಹಮದಬಾದ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ