‘ನುಡಿದಂತೆ ನಡೆಯದ ಪ್ರಧಾನಿ ಮೋದಿ’

Rahul gandhi in janashirvada yatra mangalore

20-03-2018

ಮಂಗಳೂರು: ಎಲ್ಲರಲ್ಲೂ ಭಗವಂತನಿದ್ದಾನೆ, ವ್ಯಕ್ತಿಗತ ಚಿಂತನೆ ಬೇರೆಯಾಗಿದ್ದರೂ ಎಲ್ಲರೂ ಒಂದೇ ಅನ್ನೋದನ್ನ ನಾರಾಯಣ ಗುರುಗಳು ತೋರಿಸಿದ್ದಾರೆ ಎಂದು ಮಂಗಳೂರಿನ ಕಾಂಗ್ರೆಸ್ ಜನಾಶೀರ್ವಾದ ಸಮಾವೇಶದಲ್ಲಿ ಹೇಳಿದ್ದಾರೆ. ಪ್ರಜಾಪ್ರಭುತ್ವ ಅನ್ನೋದು ಇಂಗ್ಲೆಂಡ್ ಮತ್ತು ಅಮೇರಿಕಾದಲದಲ್ಲಿ ಕೆಲ ವರ್ಷಗಳ ಹಿಂದೆ ಇತ್ತು, ಆದರೆ ಕರ್ನಾಟಕದಲ್ಲಿ ಅದು ಶತಮಾನಗಳ ಹಿಂದೆಯೇ ಇತ್ತು ಎಂದು ಹೇಳಿದ್ದಾರೆ.

ಬಿಜೆಪಿಯವರು ಜನರ ನಡುವೆ ಭಿನ್ನಾಭಿಪ್ರಾಯ ತರೋ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಹಾಪುರುಷರು ಕೋಮುಸೌಹಾರ್ದತೆ, ಸಾಮರಸ್ಯ ಮೂಡಿಸಿದ್ದ ಬಾಂಧವ್ಯವನ್ನು ಜಿಜೆಪಿಯವರು ಈಗ ಪ್ರತಿನಿತ್ಯ ಒಡೆಯಲು ಮುಂದಾಗುತ್ತಿದ್ದಾರೆ ಎಂದು ದೂರಿದರು.

ಜನತಂತ್ರ ವ್ಯವಸ್ಥೆಯನ್ನ ಬಿಜೆಪಿಯವರು ಹಾಳು ಮಾಡುತ್ತಿದ್ದಾರೆ. ಜನಸಾಮಾನ್ಯರ ದುಡ್ಡನ್ನು ಕೊಟ್ಯಾಧಿಪತಿ ಉದ್ಯಮಿಗಳ ಸಾಲದ ದುಡ್ಡನ್ನಾಗಿಸಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಲು ಆಗಲ್ಲ ಅನ್ನೋ ಬಿಜೆಪಿಯವರು ಕೋಟ್ಯಾಧಿಪತಿಗಳ ಸಾಲಮನ್ನಾ ಮಾಡಿಸಿದ್ದಾರೆ. ಜನರಿಗೆ ದ್ರೋಹ ಮಾಡೋದೇ ಬಿಜೆಪಿ ಕೆಲಸವಾಗಿದೆ ಎಂದು ಟೀಕಿಸಿದ್ದಾರೆ.

ಬಸವಣ್ಣ ಹಾಗೂ ನಾರಾಯಣ ಗುರುಗಳ ಹೆಸರು ಬಳಸುವ ಪ್ರಧಾನಿಗಳು ಅವರ ಹಾದಿ ಯಾಕೆ ಪಾಲಿಸಲ್ಲ. ಶ್ರೀಮಂತರರು ಹಾಗೂ ಬಡವರ ನಡುವೆ ಅಂತರ ಯಾಕೆ ಇಟ್ಟುಕೊಂಡಿದ್ದೀರಾ?  ಶ್ರೀಮಂತರ ಸಾಲ ಮನ್ನ ಮಾಡುವ ಮೋದಿಗೆ ರೈತರ ಸಾಲ ಮನ್ನಾ ಮಾಡಲು ಯಾಕೆ ಸಾಧ್ಯವಾಗಲ್ಲ ಎಂದು ಪ್ರಶ್ನಿಸಿದ್ದಾರೆ. ನುಡಿದಂತೆ ನಡೆಯದ ಪ್ರಧಾನಿ ಮೋದಿ, ಯುವಕರಿಗೆ ಉದ್ಯೋಗದ ಭರವಸೆ ನೀಡಿದ್ದರೂ ಅದನ್ನು ಇನ್ನೂ ಈಡೇರಿಸಿಲ್ಲ, ಜನ್ ಧನ್ ಅಕೌಂಟ್ ಗೆ ಹದಿನೈದು ಲಕ್ಷ ನೀಡೋದಾಗಿ ಹೇಳಿದ್ದವರು ಹತ್ತು ರೂಪಾಯಿಯನ್ನೂ ಹಾಕಿಲ್ಲ ಎಂದು ಲೇವಡಿ ಮಾಡಿದರು.

ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸೋದಾಗಿ ಹೇಳಿದ ಬಿಜೆಪಿ ಅದನ್ನೂ ಮಾಡಿಲ್ಲ. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ರೈತರ ಸಾಲ ಮನ್ನವಾಗಿದೆ. ನೀರಾವರಿ ಸೌಲಭ್ಯ ಒದಗಿಸಲಾಗಿದೆ,‌ ಅನ್ನ ಭಾಗ್ಯ ಜಾರಿಯಾಗಿದೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ, ಹೀಗೆ ಹಲವು ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಆ ಮೂಲಕ ನುಡಿದಂತೆ ನಾವು ನಡೆದಿದ್ದೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

Rahul Gandhi Janashirvada ಬೆಂಬಲ ಬೆಲೆ ಅನ್ನ ಭಾಗ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ