ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಎಸಿಬಿ

Karnataka: ACB raid on AEE and deputy tahsildar office

20-03-2018

ಚಿಕ್ಕಮಗಳೂರು: ತಾಲ್ಲೂಕಿನ ಉಪ ತಹಶಿಲ್ದಾರ್ ಕೀರ್ತಿಜೈನ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಳಸ ಬಳಿಯ ಸಂಸೆ ಗ್ರಾಮದಲ್ಲಿರುವ ಬಂಗಲೆ, ಕಛೇರಿ, ಸಂಬಂಧಿಕರು ಮನೆಗಳ ಮೇಲೆ ಏಕಕಾಲಕ್ಕೆ, ಪಶ್ಚಿಮ ವಲಯ ಎಸಿಬಿ ಎಸ್.ಪಿ ಶೃತಿ ಹಾಗೂ ಚಿಕ್ಕಮಗಳೂರು ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಚಿ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೀದರ್ ನ ಹುಮ್ನಾಬಾದ್ ತಾಲ್ಲೂಕಿನ ಕಾರಂಜಾ ನೀರಾವರಿ ಯೋಜನೆಯ ಎಇಇ ವಿಜಯ್ ಕುಮಾರ್ ಅವರ ಮನೆ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಕಲಬುರಗಿ ನಗರದ ಭಗವತಿ ನಗರದಲ್ಲಿರುವ ಮನೆ ಹಾಗು ಇವರಿಗೆ ಸಂಬಧಪಟ್ಟ ಇತರೆ ಸ್ಥಳಗಳಲ್ಲೂ ಎಸಿಬಿ ಡಿವೈಎಸ್ಪಿ ವಿರೇಶ್ ನೇತೃತ್ವದಲ್ಲಿ ದಾಳಿ ಮಾಡಿ, ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.  ಬೆಳಗಾವಿ-ಧಾರವಾಡದಲ್ಲೂ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿಯ ಎಇಇ ಕಿರಣ ಸುಬ್ಬರಾವ್ ಭಟ್ ಅವರ ಮನೆ ಕಚೇರಿ ಸೇರಿ 6ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದು ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ACB Raid ಹುಮ್ನಾಬಾದ್ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ