ನಕಲಿ ವೈದ್ಯನಿಗೆ ವಿದ್ಯಾರ್ಥಿ ಬಲಿ

Kannada News

11-05-2017

ಕೋಲಾರ ; ಕಿವಿ ನೋವು ಎಂದು ಹೋಗಿದ್ದ ವಿದ್ಯಾರ್ಥಿಗೆ ವೈದ್ಯರು ಚುಚ್ಚುಮದ್ದು ನೀಡಿದರು. ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿರುವ ಅಭಿರಾಮ್ ಎಂಬ ವಿದ್ಯಾರ್ಥಿ ಚಿಕಿತ್ಸೆ ನೀಡಿದ ಬಳಿಕ ಮೃತಪಟ್ಟಿದ್ದು, ನವೀನ್ ಎಂಬ ವೈದ್ಯನಿಂದ ಈ ಕೃತ್ಯ ಜರುಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿ ಶಾರದಮೂರ್ತಿ ಎಂಬ ಹೆಸರಿನ ಕ್ಲಿನಿಕ್ ಇಟ್ಟು ಕೊಂಡಿದ್ದ ವೈದ್ಯ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗೆಂದು ಕೋಲಾರಕ್ಕೆ ರವಾನಿಸುವಾಗ ವಿದ್ಯಾರ್ಥಿ ಮೃತಪಟ್ಟಿದ್ದು ಪೋಷಕರಿಂದ ವೈದ್ಯನ ವಿರುದ್ದ ದೂರು ದಾಖಲಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ