‘ಯಾರೇ ಭೇಟಿಯಾದರೂ ನಮ್ಮ ನಿಲುವು ಬದಲಿಸಲ್ಲ’

Sharan Prakash Patil reaction on lingayat issue

20-03-2018

ಕಲಬುರಗಿ: ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸಿಗೆ ವೀರಶೈವರು ಸ್ವಾಗತಿಸಿದ್ದಾರೆ, ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಈಶ್ವರ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ ಅವರೂ ಶಿಫಾರಸ್ಸುನ್ನು ಸ್ವಾಗತಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಇಂದು ಜಗದ್ಗುರುಗಳ ನೇತೃತ್ವದಲ್ಲಿ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಲು ಕೆಲವರು ಮುಂದಾಗಿದ್ದಾರೆ, ಶಾಮನೂರು ಶಿವಶಂಕರಪ್ಪ ಸೇರಿ ಎಲ್ಲ ಸಚಿವರುಗಳು ಶಿಫಾರಸ್ಸಿಗೆ ಬದ್ದವಾಗಿರಲಿದ್ದಾರೆ, ಯಾರೇ ಭೇಟಿಯಾದರು ನಿಲುವನ್ನು ಯಾರು ಬದಲಿಸಲ್ಲ ಎಂದು ಹೇಳಿದ್ದಾರೆ. ನಿನ್ನೆ ಕಲಬುರಗಿಯಲ್ಲಿ ನಡೆದ ಪರ-ವಿರೋಧ ಮಾರಾಮಾರಿ ಯಾರ ಪ್ರೇರಿತದಿಂದ ನಡೆದಿದೆ ಗೊತ್ತಿಲ್ಲ, ಮಾರಾಮಾರಿ ಮಾಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ