ಸರ್ಕಾರಿ ನೌಕರನ ಮೇಲೆ ಬಿಜೆಪಿ ಮುಖಂಡ ಹಲ್ಲೆ

udupi:BJP leader assault on government employee

20-03-2018

ಉಡುಪಿ: ಬಿಜೆಪಿ ಮುಖಂಡನೊಬ್ಬ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ವಿಶ್ವ ಹಿಂದೂ ಪರಿಷದ್ ನ ನಗರಾಧ್ಯಕ್ಷ ಹಾಗೂ‌ ಬಿಜೆಪಿ ಮುಖಂಡನಾಗಿರುವ ಸಂತೋಷ್ ಸುವರ್ಣ ಬೊಳ್ಜೆ ಎನ್ನುವ ವ್ಯಕ್ತಿ, ಸರಕಾರಿ ಕಚೇರಿ ಸಿಬಂದಿಗೆ ಹಲ್ಲೆ ನಡೆಸಿದ್ದಾನೆ. ಸಮಾಜ ಕಲ್ಯಾಣ ಇಲಾಖೆಯ ಗುಮಾಸ್ತ ಅಂಗಾರ ಸುವರ್ಣ ತನ್ನ ಕಚೇರಿಯಲ್ಲಿ ಫೈಲ್ ಗಳನ್ನು ತೆಗೆದಿಡುತ್ತಿರುವ ಸಂದರ್ಭದಲ್ಲಿ ಏಕಾಎಕಿ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ‌ನೌಕರನ ಕೈ ಮೂಳೆ‌ ಮುರಿದಿದ್ದು, ನಗರದ ಸರಕಾರಿ‌ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ.

ಉಡುಪಿ ತಾಲ್ಲೂಕು ಪಂಚಾಯತ್ ಅವರಣದಲ್ಲಿ ಇರುವ ಸಮಾಜ‌ಕಲ್ಯಾಣ ಇಲಾಖೆ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿತ್ತು. ಅದರೆ ಕಚೇರಿಯ ಕಡತಗಳು ಹಳೇ ಕಚೇರಿಯಲ್ಲಿಯೇ ಇದ್ದವು. ಇದ್ದಕ್ಕಿದ್ದಂತೆ ಮಳೆ ಸುರಿದ ಪರಿಣಾಮ, ಕಟ್ಟಡ ಸೋರುತ್ತಿದ್ದ ಹಿನ್ನಲೆಯಲ್ಲಿ, ಇಲಾಖೆಯ ಸಿಬ್ಬಂದಿಗಳು ಕಡತಗಳನ್ನು ಸುರಕ್ಷಿತವಾಗಿಡುವ ದೃಷ್ಟಿಯಿಂದ ಅದನ್ನ ತೆಗೆದಿರಿಸುತ್ತಿದ್ದ ಸಂದರ್ಭ ಪಕ್ಕದಲ್ಲೇ, ಅಂಗನವಾಡಿ ಇಲಾಖೆಯ ಕಟ್ಟಡ ಕಾಮಗಾರಿ‌ ಟೆಂಡರ್ ವಹಿಸಿದ್ದ ಸಂತೋಷ್ ಮರದ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಯಾವುದೇ ಕಾರಣವಿಲ್ಲದೆ ಬಿಜೆಪಿ ಮುಖಂಡ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಅಂಗರ ಸುವರ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಕರ್ತವ್ಯದಲ್ಲಿದ್ದ ಸರಕಾರಿ‌ ನೌಕರನಿಗೆ ಜವಾಬ್ದಾರಿಯುತ ಮುಖಂಡನೊಬ್ಬ ಹಲ್ಲೆ ನಡೆಸಿರುವುದು ಸರಕಾರಿ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.


ಸಂಬಂಧಿತ ಟ್ಯಾಗ್ಗಳು

BJP Leader attack ಅವರಣ ಜವಾಬ್ದಾರಿಯುತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ