ಶಶಿಕಲಾ ಪತಿ ನಟರಾಜನ್ ಇನ್ನಿಲ್ಲ...

VK Sasikala

20-03-2018

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ಪತಿ ನಟರಾಜನ್ ಮಾರುತಪ್ಪ (75) ತಡ ರಾತ್ರಿ ನಿಧನರಾಗಿದ್ದಾರೆ. ಪತಿ ಮೃತ ಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಪತಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಪೆರೋಲ್ ಪಡೆದುಕೊಂಡಿದ್ದಾರೆ.

ನಟರಾಜನ್ ಕಳೇಬರವನ್ನು ಚೆನ್ನೈ ನಿಂದ ತಂದು ತಂಜಾವೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಗುವುದು. ಅದಕ್ಕಾಗಿ ತಂಜಾವೂರಿನಲ್ಲಿ ಸಿದ್ಧತೆಗಳು ನಡೆದಿವೆ. ನಟರಾಜನ್ ಮೂಲತಃ ಪತ್ರಕರ್ತ. ಹಿಂದಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ನಟರಾಜನ್ ನಂತರ ಜಯಲಲಿತಾ ಅವರ ಆಪ್ತನಾಗಿ ಜಯಲಲಿತಾ ತಮಿಳುನಾಡಿನ ‌ಮುಖ್ಯಮಂತ್ರಿಯಾದ ನಂತರ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಟರಾಜನ್ ಅವರೇ ಶಶಿಕಲಾ ಅವರನ್ನು ಜಯಲಲಿತಾ ಅವರಿಗೆ ಪರಿಚಯಿಸಿದ್ದರು.

ಕಳೆದ ಅಕ್ಟೋಬರ್ ನಲ್ಲಿ ನಟರಾಜನ್ ಅನಾರೋಗ್ಯಕ್ಕೊಳಗಾಗಿದ್ದರು. ಲಿವರ್ ಮತ್ತು ಕಿಡ್ನಿ ವೈಫಲ್ಯಕ್ಕೊಳಗಾಗಿದ್ದ ಅವರಿಗೆ ಅವೆರಡನ್ನೂ ಬದಲಿಸಿ ಚಿಕಿತ್ಸೆ ನೀಡಿದ್ದರು. ಕಳೆದ ವರ್ಷ ನವೆಂಬರ್ 2ರಂದು ನಟರಾಜ್ ಆಸ್ಪತ್ರೆಯಿಂದ ಮನೆ ತೆರಳಿದ್ದರು. ನಂತರ, ಆಗಾಗ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ಗೆ ಒಳಗಾಗುತ್ತಿದ್ದರು. ಈ ಮಧ್ಯೆ, ನಟರಾಜನ್ ಮಾರ್ಚ್ 1ರಂದು ಉಸಿರಾಟದ ತೊಂದರೆ ಹಾಗೂ ರಕ್ತ ಸ್ರಾವಕ್ಕೊಳಗಾಗಿದ್ದರು. ಚಿಕಿತ್ಸೆಗಾಗಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಿಸದೆ ನಟರಾಜನ್ ನಿನ್ನೆ ತಡ ರಾತ್ರಿ ವಿಧಿವಶರಾದರು.


ಸಂಬಂಧಿತ ಟ್ಯಾಗ್ಗಳು

Sasikala Natarajan, AIADMK ವಿಧಿವಶ ಅಗ್ರಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ