8ಲಕ್ಷ ಮೌಲ್ಯದ ಸಾರಾಯಿ ಜಪ್ತಿ

police seized 8 lakh worth of illegal alcohol

20-03-2018

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ರಸ್ತೆಯ ಎಂ.ಎಸ್.ಸಾವಜಿ ಡಾಬಾದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 8ಲಕ್ಷ ಮೌಲ್ಯದ ಸಾರಾಯಿ ಜಪ್ತಿ ಮಾಡಲಾಗಿದೆ. ಅಬಕಾರಿ ಪೊಲೀಸ್ ಎ.ಎ.ಮುಜಾವರ ನೇತೃತ್ವದಲ್ಲಿ ದಾಳಿ ನಡೆಸಿ, ಒಂದು ಕ್ರೂಸರ್ ಹಾಗೂ ದ್ವಿಚಕ್ರ ವಾಹನ ಸೇರಿದಂತೆ ಗ್ರಾಮದ ಮಡಿವಾಳಪ್ಪ ಕೊಡಗಾನೂರ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊರ್ವ ಆರೋಪಿ ಲಕ್ಷ್ಮಣ ಜಾಲಾಪೂರ ಪರಾರಿಯಾಗಿದ್ದು ಆತನಿಗಾಗಿ ಹುಟುಕಾಟ ನಡೆಸಿದ್ದಾರೆ. ತಾಲ್ಲೂಕಿನ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

alchohol police ಡಾಬಾ ಕ್ರೂಸರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ