ಭಾರೀ ಮಳೆಗೆ ಮಹಿಳೆ ಸಾವು

Heavy rain at uttara kannada: a woman died

20-03-2018

ಉತ್ತರ ಕನ್ನಡ: ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕಿನ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಗುಡುಗಿನ ಆರ್ಭಟಕ್ಕೆ ಎರಡು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಮಹಿಳೆ ಹಾಗೂ ಆಲೆ ಮನೆಯ ಕೋಣ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ನೇತ್ರಾವತಿ ಸುರೇಶ ನಾಯ್ಕ (40) ಮೃತ ಮಹಿಳೆ, ಈಕೆಯ ಪತಿ ಸುರೇಶ್ ತಿಮ್ಮನಾಯ್ಕ (48) ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲುಸಿರ್ಸಿಯ ಅವರಗುಪ್ಪಾದ ಆಲೆ ಮನೆಗೆ ಸಿಡಿಲು ಬಡಿದು ಒಂದು ಕೋಣ ಸಾವನ್ನಪ್ಪಿದೆ. ಇದೇ ಗ್ರಾಮದ ಆಲೆಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇವಣ್ಣ (53 ) ಮಹಾಬಲೇಶ್ವರ ನಾಯ್ಕ (50) ಸಿಡಿಲು ಬಡಿದು ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮೀಣ ಠಾಣೆ ಹಾಗೂ ಸಿದ್ದಾಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.


ಸಂಬಂಧಿತ ಟ್ಯಾಗ್ಗಳು

heavy Rain lightining ಗ್ರಾಮೀಣ ಗುಡುಗು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ