ಬನ್ನೇರುಘಟ್ಟ: ಜೈವಿಕ ಉದ್ಯಾನವನದಲ್ಲಿ ಸಿಂಹಿಣಿ ಸಾವು

Lioness died at bannerghatta national park

19-03-2018

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಸುಮಾರು 25 ವರ್ಷ ವಯಸ್ಸಿನ ಸಿಂಹಿಣಿಯೊಂದು ಮೃತಪಟ್ಟಿದೆ. ಇಲ್ಲಿನ ಸಿಂಹಗಳ ಸಫಾರಿಯಲ್ಲಿದ್ದ ಸಿಂಹಿಣಿ ನಿನ್ನೆ ಮೃತಪಟ್ಟಿದ್ದು, ವಯೋಸಹಜ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ತಿಳಿಸಿದ್ದಾರೆ. ಸಿಂಹಿಣಿಯನ್ನು 8ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಪ್ರಾಣಿ ವಿನಿಮಯದಡಿಯಲ್ಲಿ ಬನ್ನೇರುಘಟ್ಟಕ್ಕೆ ತರಲಾಗಿತ್ತು. ಜೈವಿಕ ಉದ್ಯಾನವನದಲ್ಲಿ ಆಗಾಗ ಪ್ರಾಣಿಗಳು ಸಾವನ್ನಪ್ಪುತ್ತಿದ್ದು ಹಲವು ಅನುಮಾನಗಳು ಮೂಡುತ್ತಿವೆ. ಇದೀಗ ಸಿಂಹಿಣಿ ಸಾವು ಕೂಡ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.


ಸಂಬಂಧಿತ ಟ್ಯಾಗ್ಗಳು

botinical park National park ಬನ್ನೇರುಘಟ್ಟ ಅನುಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ