ತಾಯಿ-ಮಗಳು ಒಂದೇ ಮನೆಯಲ್ಲಿ ಆತ್ಮಹತ್ಯೆ

Mother and daughter suicide at home

19-03-2018

ಬೆಂಗಳೂರು: ಪ್ರಕಾಶ್ ನಗರದಲ್ಲಿ ತಾಯಿ-ಮಗಳು ಇಬ್ಬರು ನೇಣಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರಕಾಶ್ ನಗರದ ಮೊದಲಿಯಾರ್ ಸೇವಾಶ್ರಮದ ಬಳಿ ವಾಸಿಸುತ್ತಿದ್ದ ಸಾವಿತ್ರಮ್ಮ (60), ಅವರ ಪುತ್ರಿ ಮಂಜು ದೇವಕಿ (37) ಎಂದು ಗುರುತಿಸಲಾಗಿದೆ.

ಸಾವಿತ್ರಮ್ಮ ಅವರ ಪತಿ 10 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಪುತ್ರ ಕೆಂಗೇರಿಯಲ್ಲಿ ವಾಸವಾಗಿದ್ದ ಮಗಳೊಂದಿಗೆ ಸಾವಿತ್ರಮ್ಮ ನೆಲೆಸಿದ್ದರು. ದೇವಕಿಗೆ 37 ವರ್ಷ ತುಂಬಿದ್ದರೂ ವಿವಾಹವಾಗಿರಲಿಲ್ಲ. ಇದರಿಂದ ನೊಂದ ತಾಯಿ-ಮಗಳು ಕಳೆದ ಶುಕ್ರವಾರವೇ ಮನೆಗೆ ಒಳಗಿಂದ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು, ಕೆಂಗೇರಿಯಲ್ಲಿದ್ದ ಮಗನಿಗೆ ವಿಷಯ ತಿಳಿಸಿದ್ದಾರೆ. ಆತ ಬಂದು ಬಾಗಿಲು ತೆಗೆದು ನೋಡಿದಾಗ ತಾಯಿ-ಮಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿರುವ ರಾಜಾಜಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Marriage ದುರ್ವಾಸನೆ ಸೇವಾಶ್ರಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ