ಬ್ಯಾನರ್ ವಿರೂಪ: ವಿ.ಹೆಚ್.ಪಿ ಆಕ್ರೋಶ

Banner deformation in vijayapura: VHP outrage

19-03-2018

ವಿಜಯಪುರ: ಇದೇ ತಿಂಗಳ ಮಾರ್ಚ್ 29ರಂದು ಜಿಲ್ಲೆಯ ಮುದ್ದೇಬಿಹಾಳದಲ್ಲಿ ವಿಶ್ವಹಿಂದೂ ಪರಿಷದ್ ನಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಹಾಕಿರುವ ಬ್ಯಾನರ್ ಗಳನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಅಧ್ಯಕ್ಷರು ಸಾಧ್ವಿ ಸರಸ್ವತಿ ಅವರ ಕಾರ್ಯಕ್ರಮಕ್ಕೆ ಸ್ವಾಗತಕೋರಿ ಹಾಕಿದ್ದ ಬ್ಯಾನರ್ಗಳಲ್ಲಿ ಬ್ಲೇಡನಿಂದ ಸಾಧ್ವಿ ಸರಸ್ವತಿ ರುಂಡ ಕಟ್ ಮಾಡಿದ್ದಾರೆ. ಅದಲ್ಲದೇ ಬ್ಯಾನರ್ ನಲ್ಲಿರುವ ವಿ.ಹೆಚ್‌.ಪಿ ಮುಖಂಡ ಭಾವಚಿತ್ರದಲ್ಲಿನ ಕಣ್ಣುಗಳನ್ನ ಕಿತ್ತು ಹಾಕಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ವಿಹೆಚ್ಪಿ ಮುಖಂಡರು, ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿ ಕೃತ್ಯ ಎಸಗಿದವರ ಬಂಧನಕ್ಕೆ ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sadvi saraswati VHP ಧರ್ಮ ಪ್ರಚಾರ ಸನಾತನ ಧರ್ಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ