ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರೇಸ್ ನಲ್ಲಿ ನಾನಿಲ್ಲ : ಮಲ್ಲಿಕಾರ್ಜುನ ಖರ್ಗೆ

Kannada News

11-05-2017

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ರೇಸ್ ನಲ್ಲಿ ನಾನಿಲ್ಲ.. ಅಂಥಹ ರೇಸ್ಗೆ ಹೋಗೋದೂ ಇಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.. ಆದ್ರೆ ಹೈಕಮಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದೂ ಖರ್ಗೆ ತಿಳಿಸಿದ್ದಾರೆ.. ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಯತ್ನ ಪಡುತ್ತಲೂ ಇಲ್ಲ.. ಪ್ರಯತ್ನ ಮಾಡೋದೂ ಇಲ್ಲ. ಆ ಗೋಜಿಗೂ ಹೋಗಲಾರೆ. ಈ ಹಿಂದೆ ನಾನು ಮಲೇಶಿಯಾದಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಬಗ್ಗೆ ಕರೆ ಮಾಡಿ ಹೇಳಿದ್ರು.. ಪಕ್ಷದಿಂದ ಬಹುತೇಕ ಬಹುತೇಕ ಹುದ್ದೆ ಪಡೆದುಕೊಂಡಿದ್ದಾಗಿದೆ ಹೈಕಮಾಂಡ್ ಹೇಳಿದ್ದನ್ನು ಮಾಡ್ತಿನಿ ಎಂದರು.. ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕೆನ್ನುವ ಬಗ್ಗೆ ಪಕ್ಷದ ವರಿಷ್ಠರು ಕರೆದು ಕೇಳಿದ್ರೆ ನನ್ನ ಅಭಿಪ್ರಾಯ ಹೇಳ್ತಿನಿ.. ಇಲ್ಲಿಯವರೆಗೆ ನನಗೆ ಕೇಳಿಲ್ಲ. ಹಾಗಾಗಿ ನಾನು ಮೂಗು ತೂರಿಸುವುದು ಸರಿಯಲ್ಲ ಎಂದು ಸುಮ್ಮನಿದ್ದೇನೆ ಎಂದರು. ನಿನ್ನೆ ಬುದ್ಧ ಪೂರ್ಣಿಮೆಯ ಹಿನ್ನಲೆಯಲ್ಲಿ ಬೆಂಗಳೂರಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ವೇಣುಗೋಪಾಲ ಅವರು ರಾಜ್ಯದ ಮುಖಂಡರೊಂದಿಗೆ ನಡೆಸಿದ ಸಮಾಲೋಚನೆಯ ಬಗ್ಗೆ ಹೈಕಮಾಂಡ್ ಗೆ ವರದಿ ಸಲ್ಲಿಸುತ್ತಾರೆ.. ಮುಂದಿನ ಒಂದು ವಾರದೊಳಗೆ ಹೈಕಮಾಂಡ್ ನೂತನ ಅಧ್ಯಕ್ಷರ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ ಎಂದು ಖರ್ಗೆ ವಿವರಿಸಿದರು. 
    ಲೋಕಸಭೆಯ ಸಂಸದೀಯ ಪಕ್ಷದ ನಾಯಕ ಸ್ಥಾನಕ್ಕೆ ಜ್ಯೋತಿರಾಧಿತ್ಯ ಸಿಂದೆ ಹೆಸರು ಕೇಳಿ ಬರುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.. ಅದನ್ನು ಅವರಿಗೇ ಕೇಳಿ ಎಂದರು. 
    ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಳ್ಳೆಯ ಆಡಳಿತ ನೀಡಿದೆ.. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ.. ಖಂಡಿತವಾಗಿ ಮುಂದಿನ ಬಾರಿಯೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಕೆಲ ನಾಯಕರು ಕಾಂಗ್ರೆಸ್ ಬಿಡುತ್ತಿರುವ ಕುರಿತು, ಈ ಬಗ್ಗೆ ನನಗೆ ಮಾಹಿತಿ ಇಲ್ಲ.. ಯಾರೂ ಪಕ್ಷ ಬಿಡಬಾರದು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಬಲಪಡಿಸಬೇಕು ಎಂದು ಖರ್ಗೆ ಮನವಿ ಮಾಡಿಕೊಂಡರು..

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ