ರೋಗಿಯನ್ನು ಬೀದಿಗೆ ತಳ್ಳಿದ ಆಸ್ಪತ್ರೆ ಸಿಬ್ಬಂದಿ..!

19-03-2018
ಬೀದರ್: ಹಣ ಇಲ್ಲದ್ದಕ್ಕೆ ರೋಗಿಗೆ ಚಿಕಿತ್ಸೆ ನೀಡದ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಬೀದಿಗೆ ಬಿಸಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಮನ್ನಖೇಳ್ಳಿ ಆಸ್ಪತ್ರೆಯಲ್ಲಿ ಕೆಳೆದೆರಡು ದಿನಗಳ ಹಿಂದೆ ಕೈ ಕಳೆದುಕೊಂಡ ರಾಜಸ್ಥಾನ ಮೂಲದ ಲಾರಿ ಚಾಲಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆತನ ಬಳಿ ಚಿಕಿತ್ಸೆಗೆ ಹಣ ಎಂಬ ಕಾರಣ ನೀಡಿ ಸುಡುಬಿಸಿಲಿನಲ್ಲಿ ಬೀದಿಗೆ ತಂದು ಬಿಟ್ಟಿದ್ದಾರೆ. ಕೈ ಕಳೆದುಕೊಂಡು ಆಸ್ಪತ್ರೆ ಎದುರು ನೋವು ತಾಳಲಾರದೇ ವಿಲ ವಿಲ ಒದ್ದಾಡುತ್ತಿದ್ದವನ್ನು ಕಂಡ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗೆ ಅಂಟಿಕೊಂಡ ಅಮಾನವೀಯ ರೋಗಕ್ಕೆ ಮಿತಿಯೇ ಇಲ್ಲ ಎಂಬಂತಾಗಿದೆ. ಘಟನೆ ಕುರಿತು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ