ಪೇದೆಗಳ ಮೇಲೆ ಹಲ್ಲೆಗೆ ಖಂಡನೆ

Ramalinga reddy condemned: assault on police constables

19-03-2018

ಬೆಂಗಳೂರು: ವರ್ತೂರು ಮುಖ್ಯ ರಸ್ತೆಯ ಸಿದ್ದಾಪುರ ಬಳಿ‌ ನಿನ್ನೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದಕ್ಕೆ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಹಾಡುಹಗಲೇ ಹಲ್ಲೆ ಮಾಡಲಾಗಿದೆ. ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ಪೊಲೀಸ್ ಪೇದೆಗಳಿಬ್ಬರು ದಾಳಿ ಮಾಡಿ, ಕ್ರಮಕ್ಕೆ ಮುಂದಾಗಿದ್ದಾರೆ. ಈ ವೇಳೆ ದುಷ್ಕರ್ಮಿಗಳ ಗುಂಪು ಪೇದೆಗಳ ಮೇಲೆ ಹಲ್ಲೆ ಮಾಡಿದ್ದಾರೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಖಂಡನೀಯ, ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ಪೇದೆಗಳು ದಾಳಿ ಮಾಡಿದ ಸಂದರ್ಭ ಹಲ್ಲೆ ಮಾಡಲಾಗಿದೆ. ಹಬ್ಬದ ವೇಳೆ ಈ ಆಟ ಆಡಲು ಅವಕಾಶ ಇಲ್ಲ, ಹೀಗಿರುವಾಗ ಕಾನೂನು ಪಾಲನೆಗೆ ಹೋದರೆ ಹೊಡೆಯೊದು ತಪ್ಪು ಎಂದು  ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷ ಯಾವುದಾದರೂ ಕಾನೂನು ಕ್ರಮ ಮಾತ್ರ ಒಂದೇ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramalinga Reddy Police ಗೃಹ ಸಚಿವ ಅವಕಾಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ