ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

Controversial statement of H.T.sangliana

17-03-2018

ಬೆಂಗಳೂರು: ದೆಹಲಿಯಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ನಿರ್ಭಯಾ ಮತ್ತು ಅವರ ತಾಯಿಯ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ.ಸಾಂಗ್ಲಿಯಾನ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿವೃತ್ತ  ಅಧಿಕಾರಿಯ ಬಾಯಲ್ಲಿ ಇದೆಂಥಾ ಮಾತು, ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ ನಿರ್ಭಯಾ ತಾಯಿ ಅವರ ಮೈಕಟ್ಟು ಬಣ್ಣಿಸಿ ವಿವಾದಕ್ಕೀಡಾಗಿದ್ದಾರೆ.

ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಂಗ್ಲಿಯಾನ ತಮ್ಮ ಭಾಷಣದಲ್ಲಿ, ನಿರ್ಭಯಾ ತಾಯಿ ಉತ್ತಮ ಮೈಕಟ್ಟು ಹೊಂದಿದ್ದಾರೆ, ತಾಯಿಯೇ ಇಷ್ಟು ಸುಂದರವಾಗಿರುವಾಗ ಮಗಳು ಇನ್ನೆಷ್ಟು ಚೆನ್ನಾಗಿದ್ದಳು ಎಂದು ನಾನು ಊಹಿಸುವೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಲು ಮುಂದಾದರೆ ಸುಮ್ಮನೇ ಶರಣಾಗಬೇಕು, ಹೇಳಿದಂತೆ ಕೇಳಿದರೆ ಕೊಲೆಯಾಗುವುದನ್ನು ತಪ್ಪಿಸಬಹುದು ಎಂದು ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ.

ಆದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಸಾಂಗ್ಲಿಯಾನ, ‘ಯಾವುದೇ ಕೆಟ್ಟ ಉದ್ದೇಶದಿಂದ ಆ ರೀತಿ ಹೇಳಲಿಲ್ಲ ಎಂದಿದ್ದಾರೆ. ‘ನೀವು ಎಷ್ಟು ಚೆನ್ನಾಗಿದ್ದೀರಾ, ಇನ್ನು 40 ವರ್ಷದ ವ್ಯಕ್ತಿಯಂತೆ ಕಾಣಿಸುತ್ತೀರಾ’ ಎಂದು ಯಾರಾದರೂ ನನ್ನ ಹತ್ತಿರ ಬಂದು ಹೇಳಿದರೆ ನನಗೆ ಸಂತೋಷವಾಗುತ್ತದೆ. ಅದೇ ಅರ್ಥದಲ್ಲಿ ನಾನು ಅವರಿಗೂ ಹೇಳಿದ್ದು. ಒಬ್ಬ ವ್ಯಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದ್ದಾರೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ