ಆಸ್ತಿ ವಿಚಾರವಾಗಿ ವ್ಯಕ್ತಿ ಕೊಲೆ

property issue: person murdered

17-03-2018

ತುಮಕೂರು: ಕುಣಿಗಲ್ ತಾಲ್ಲೂಕಿನ ಬೈರನಾಯ್ಕನಹಳ್ಳಿಯಲ್ಲಿ ಅಸ್ತಿ ವಿಚಾರವಾಗಿ ನಡೆದ ಕಲಹದಲ್ಲಿ ಚಾಕು ಇರಿತದಿಂದ ಸ್ಥಳದಲ್ಲೇ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಕಪನಯ್ಯ(55) ಮೃತ ವ್ಯಕ್ತಿ. ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಚನ್ನಯ್ಯನ ಸ್ಥಿತಿ ಚಿಂತಾಜನಕವಾಗಿದೆ. ಹಿಂಬದಿಯಿಂದ ಹೋಗಿ ಚಾಕುವಿನಿಂದ ಇರಿದ ಅರೋಪಿ ಮುದ್ದರಾಜ್ ಪರಾರಿಯಾಗಿದ್ದಾನೆ. ಹುಲಿಯೂರು ದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಗಾಗಿ ಪೋಲಿಸರು ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder property ಅರೋಪಿ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ