ಯವತಿಗೆ ಬ್ಲಾಕ್‍ಮೇಲ್: ಆರೋಪಿಗಾಗಿ ಹುಡುಕಾಟ

police searching for Blackmailing a girl

16-03-2018

ಬೆಂಗಳೂರು: ಪ್ರೇಯಸಿಯ ಬೆತ್ತಲೆ ಫೋಟೋ ಹಾಗೂ ವೀಡಿಯೋವನ್ನು ಫೇಸ್‍ಬುಕ್‍ನಲ್ಲಿ ಆಫ್‍ಲೋಡ್ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದ ಪ್ರಿಯಕರನಿಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸಿದ್ದಾರೆ. ಅರ್ಜುನ್ ಎಂಬಾತ ತನ್ನ ಪ್ರಿಯತಮೆಗೆ ಬೆದರಿಕೆ ಹಾಕಿದ್ದಾನೆ. ಒಂದು ವರ್ಷದಿಂದ ಅರ್ಜುನ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಯ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ತೆಗೆದು ಹಣ ನೀಡದಿದ್ದರೆ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದನು.

ಈ ಹಿಂದೆಯೂ ಯುವತಿ ಅರ್ಜುನ್ ಬೆದರಿಕೆಗೆ ಹೆದರಿ 50 ಸಾವಿರ ರೂ. ಹಣ ನೀಡಿದ್ದಳು. ನಂತರ ಅರ್ಜುನ್ ಮತ್ತೆ 50 ಸಾವಿರ ರೂ. ಹಣವನ್ನು ಕೇಳಿದ್ದಾನೆ. ಆಗ ಯುವತಿ ಹಣ ನೀಡಲು ನಿರಾಕರಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಅರ್ಜುನ್ ಬೆದರಿಕೆ ಹಾಕಿದ್ದು, ಇದರಿಂದ ಬೇಸತ್ತ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Black mail sexual harassment ಬೆತ್ತಲೆ ಫೋಟೋ ಬೆದರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ