‘ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ ಅಂತಾರೆ’

siddaramaiah inaugurated different programmes

15-03-2018

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಸುಮಾರು 227.53 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. ಪಿ.ಪಿ.ಪಿ ಮಾಡಲ್ ರಸ್ತೆ, ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ಭವನ, ಹಿಂದುಳಿದ ವರ್ಗಗಳ ಮೆಟ್ರಿಕ್ ಪದವಿ ಪೂರ್ವ ವಿದ್ಯಾರ್ಥಿ ನಿಲಯ ಸೇರಿ ಅನೇಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಾಯಿತು.  

ಇದೇ ವೇಳೆ 425 ಸ್ತ್ರೀಶಕ್ತಿ ಸಂಘಗಳಿಗೆ 16ಕೋಟಿ ಶೂನ್ಯ ಬಡ್ಡಿ ದರದ ಚಕ್ ವಿತರಣೆ ಮಾಡಿದರು. ನಂತರ ಮಾತನಾಡಿದ ಸಿಎಂ, ಬಿಜೆಪಿಯ ಐದು ವರ್ಷಗಳ ಅಧಿಕಾರವಧಿಯಲ್ಲಿ ಮೂರು ಮಂತ್ರಿಗಳು ಬದಲಾದರು, ಆದರೆ ದೇರಾಜು ಅರಸು ನಂತರ ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ನಾನು, 100 ಪರ್ಸೆಂಟ್ ಸರ್ಕಾರವನ್ನು ಪಕ್ಕದಲ್ಲಿಟ್ಟುಕೊಂಡು ನಮ್ಮನ್ನು 10ಪರ್ಸೆಂಟ್ ಸರ್ಕಾರ ಅಂತಾರೆ ಎಂದು ಕುಟುಕಿದರು. ಉದ್ಯೋಗ ಕೊಡಿ ಅಂದ್ರೆ ಪಕೋಡ ಮಾರಿ ಅಂತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯೋಗಿ ಆದಿತ್ಯನಾಥ್ ತನ್ನ ಸ್ಥಾನ ಉಳಿಸಿಕೊಳ್ಳಲಾರದೆ ಕರ್ನಾಟಕಕ್ಕೆ ಬಂದು ಪಾಠ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ