‘ರಾಜ್ಯದಲ್ಲಿ ಕಾಂಗ್ರೆಸ್ ಪರ ಉತ್ಸಾಹ’-ಡಿಕೆಶಿ

D.K.shivakumar visited srirangapatna constituency

15-03-2018

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಬೇರು ಇದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಂಡ್ಯ ಪ್ರವಾಸದಲ್ಲಿರುವ ಡಿಕೆಶಿ, ಕ್ಷೇತ್ರದಲ್ಲಿ ಮೊದಲು ಸಮಸ್ಯೆ ಇತ್ತು, ಈಗ ಗೊಂದಲ ನಿವಾರಣೆ ಮಾಡಿ ಕಾರ್ಯಕರ್ತರನ್ನು ಒಟ್ಟು ಮಾಡಲಾಗಿದೆ ಎಂದರು. ಕ್ಷೇತ್ರದಲ್ಲಿ ಪಕ್ಷ ತೀರ್ಮಾನ ಮಾಡೋ ವ್ಯಕ್ತಿಗೆ ಟಿಕೆಟ್ ನೀಡಲಾವುದು, ಇಡೀ ರಾಜ್ಯದಲ್ಲಿ ಪಕ್ಷದ ಪರ ಉತ್ಸಾಹ ಇದೆ. ಈ ತಿಂಗಳಲ್ಲಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಿರುವುದಾಗಿಯೂ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಯುವಕರಿಗೆ ಅವಕಾಶ ನೀಡಲಾಗುವುದು, ರಾಜ್ಯಸಭೆಗೂ ಹೊಸ ಯುವ ಪಡೆ ಆಯ್ಕೆ ಮಾಡಲಾಗಿದೆ. ನವ ಕರ್ನಾಟಕ, ಶಕ್ತಿ ಶಾಲಿ ಕರ್ನಾಟಕ ನಿರ್ಮಾಣಕ್ಕಾಗಿ ತಯಾರಿ ನಡೆಸಿದ್ದೇವೆ, ಸದ್ಯದಲ್ಲೇ ಮಂಡ್ಯ, ಮಳವಳ್ಳಿ, ಕೆ.ಆರ್‌.ಪೇಟೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು ಎಂದರು.  ಬಂಡಾಯ ಶಾಸಕರಿಗೆ ಟಿಕೆಟ್ ವಿಚಾರದ ಕುರಿತು ರಾಹುಲ್ ಗಾಂಧಿಯವರು ತೀರ್ಮಾನ ಮಾಡುತ್ತಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

D.K.Shivakumar Rajaysabha ನವ ಕರ್ನಾಟಕ ಗೊಂದಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ