ಲೈಂಗಿಕ ಕಿರುಕುಳ: ಇ-ಮೇಲ್ ಮೂಲಕ ದೂರು

Sexual harassment: yong girl Complaint by e-mail

15-03-2018

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ನಾಗಾಲ್ಯಾಂಡ್ ಮೂಲದ ಯುವತಿ ಮನೆ ಮಾಲೀಕ ಮತ್ತು ಆತನ ಪತ್ನಿ ವಿರುದ್ಧ ದೂರು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ವಾಹೆಂಗ್ ಬಾಮ್ ಲಲಿತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದು ಕೃತ್ಯಕ್ಕೆ ಆತನ ಪತ್ನಿ ರೊಂಗ್ಸೆನ್ಕಲಾ ಸಹಕಾರ ನೀಡಿದ್ದಾಳೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ನಾಗಾಲ್ಯಾಂಡ್‍ಗೆ ಹೋಗಿ ಅಲ್ಲಿಂದ ಇ-ಮೇಲ್ ಮೂಲಕ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ವಿವೇಕ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೂರಿನ ವಿವರ: ಕಳೆದ 2015ರಲ್ಲಿ ಕೆಲಸ ಆರಸಿಕೊಂಡು ಬೆಂಗಳೂರಿಗೆ ಬಂದಿದ್ದಾಗ ಪರಿಚಯವಾಗಿದ್ದ ರೊಂಗ್ಸೆನ್ಕಲಾ ನನಗೆ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಕೊಡಿಸುವುದಾಗಿ ನನ್ನನ್ನು ಹೆಚ್‍ಎಸ್‍ಆರ್ ಲೇಔಟ್ ನಲ್ಲಿರುವ ಅವರ ಮನೆಗೆ ಕರೆತಂದು ಒಂದೂವರೆ ವರ್ಷ ಅವರ ಮನೆಯಲ್ಲೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈ ವೇಳೆ ನನಗೆ ಅವರ ಮನೆಯಲ್ಲಿಯೇ ಪ್ರತ್ಯೇಕ ರೂಮಿನಲ್ಲಿ ವಾಸಿಸುವಂತೆ ತಿಳಿಸಿದ್ದರು. ರೊಂಗ್ಸೆನ್ಕಲಾ ಜೊತೆ ಆಕೆಯ ಗಂಡ ವಾಹೆಂಗ್ ಲಲಿತ್ ಸಿಂಗ್ ಹಾಗೂ ಇಬ್ಬರೂ ಮಕ್ಕಳು ವಾಸಿಸುತ್ತಿದ್ದರು.

ನಾನು ರೂಮಿನಲ್ಲಿದ್ದಾಗ ವಾಹೆಂಗ್ ಅನೇಕ ಬಾರಿ ನನ್ನ ರೂಮಿಗೆ ಪ್ರವೇಶಿಸಿ ಒತ್ತಾಯ ಪೂರ್ವಕವಾಗಿ ನನ್ನನ್ನು ಹಿಡಿದುಕೊಂಡು ನನ್ನ ಗುಪ್ತಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮನೆ ಕೆಲಸ ಮಾಡಿದ್ದಕ್ಕೆ ಪ್ರತಿ ತಿಂಗಳು ಅವರು 6 ಸಾವಿರ ರೂ.ಕೊಡುತ್ತಿದ್ದರು. ಆದರೆ ಏಳನೇ ತಿಂಗಳ ಸಂಬಳವನ್ನು ಅವರು ನನಗೆ ನೀಡಲಿಲ್ಲ. ನಂತರ ವಾಹೆಂಗ್ ವರ್ತನೆ ಬಗ್ಗೆ ಆತನ ಪತ್ನಿ ಹತ್ತಿರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಯುವತಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ