ಬಿಎಸ್ಎನ್ಎಲ್ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

BSNL contract workers protest in bengaluru

15-03-2018

ಬೆಂಗಳೂರು: ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಖಾಸಗೀಕರಣ ಮಾಡಲು ನಡೆಸುತ್ತಿರುವ ಪ್ರಯತ್ನವನ್ನು ನಿಲ್ಲಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಾರ್ಮಿಕರಿಗೆ ಭವಿಷ್ಯ ನಿಧಿ, ಇನ್ನಿತರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಬಿಎಸ್‍ಎನ್‍ಎಲ್‍ನ ನೌಕರರು ನಗರದಲ್ಲಿ ಇಂದು  ಪ್ರತಿಭಟನೆ ನಡೆಸಿದರು. ನಗರದ ಸಂಪಂಗಿರಾಮನಗರದ ಕಚೇರಿಂದ ಸಿಜಿಎಂ ಕಚೇರಿ ಚಲೋ ಪ್ರತಿಭಟನೆ ನಡೆಸಿದರು. ಬಿಎಸ್‍ಎನ್‍ಎಲ್‍ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಕೇಬಲ್ ಮ್ಯಾನ್, ಹೌಸ್ ಕೀಪಿಂಗ್, ಸೆಕ್ಯುರಿಟಿ ಹಾಗೂ ಓಎಫ್‍ಸಿ ಕಾರ್ಮಿಕರು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರು ಕೂಡಲೇ ನಮ್ಮನ್ನು ಖಾಯಂ ಕಾರ್ಮಿಕರೆಂದು ಪರಿಗಣಿಸುವಂತೆ ಒತ್ತಾಯಿಸಿದರು. ಕಾರ್ಮಿಕರಿಗೆ 18 ಸಾವಿರ ರೂ.ಗಳ ಕನಿಷ್ಠ ವೇತನ ನಿಗದಿಪಡಿಸಿ, ಕರ್ತವ್ಯ ವೇಳೆ ಮೃತಪಟ್ಟ ಕಾರ್ಮಿಕರಿಗೆ 10 ಲಕ್ಷ ಪರಿಹಾರವನ್ನು ಗುತ್ತಿಗೆದಾರರೇ ನೀಡಬೇಕೆಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡ ಗುಂಡಣ್ಣ ಆಗ್ರಹಿಸಿದರು.


ಸಂಬಂಧಿತ ಟ್ಯಾಗ್ಗಳು

BSNL Protest ಗುತ್ತಿಗೆ ಕಾರ್ಮಿಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ