ಯೋಗಿ ಆದಿತ್ಯನಾಥ್ ಗೆ ಸಿಎಂ ಟಾಂಗ್

Don

15-03-2018

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿಗೆ ಹೆಲಿಪ್ಯಾಡ್ ಮೂಲಕ ಬಂದ ಸಿಎಂ ಸಿದ್ದರಾಮಯ್ಯ, ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು. ನಂತರದಲ್ಲಿ ಮಾತನಾಡಿದ ಅವರು, ಬಿಜೆಪಿ ಉತ್ತರಪ್ರದೇಶದಲ್ಲೇ ಸೋತು ಸುಣ್ಣವಾಗಿದೆ. ಮುಖ್ಯ ಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಕ್ಷೇತ್ರಗಳಲ್ಲೇ ಬಿಜೆಪಿ ಸೋಲುಂಡಿದೆ, ಅವರದ್ದೇ ಅಲ್ಲಿ ಹಳಸಿರುವಾಗ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಸ್ವಕ್ಷೇತ್ರದಲ್ಲಿ ಸೋಲಾಗಿರುವುದು ಅವರ ಬಂಡವಾಳ ಗೊತ್ತಾಗಿದೆ ಎಂದು ಕುಟುಕಿದ್ದಾರೆ.

ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದು ಹಿಂದುತ್ವದ ಭಾಷಣ ಮಾಡುತ್ತಾರೆ, ಉತ್ತರಪ್ರದೇಶದಲ್ಲೇ ಹಿಂದುತ್ವ ಮೋಡಿ ನಡೆದಿಲ್ಲ, ಅಲ್ಲಿ ಸಲ್ಲದವರು ಇಲ್ಲಿ ಸಲ್ಲರಯ್ಯ, ಇಲ್ಲಿ ಸಲ್ಲುವರು ಅಲ್ಲೂ ಸಲ್ಲುವರಯ್ಯ ಎಂದರು. 2019ರ ಲೋಕಸಭೆ ಹಾಗೂ 2018ರ ಕರ್ನಾಟಕ ಚುನಾಚಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮಹಾ ಸುಳ್ಳುಗಾರ, ಈಶ್ವರಪ್ಪ ಅವರಿಗೆ ನಾಲಗೆ ಮೇಲೆ ಹಿಡಿತ ಇಲ್ಲ ಎಂದು ದೂರಿದರು. ಕರ್ನಾಟಕದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ, ಕಾಂಗ್ರೆಸ್ ಮೈತ್ರಿಕೂಟದ ಪಕ್ಷಗಳಿಗೆ ಜನ ಬೆಂಬಲಿಸಲಿದ್ದಾರೆ, ಅದಕ್ಕೆ ಯುಪಿ ಉಪಚುನಾವಣೆ ಫಲಿತಾಂಶವೇ ಸಾಕ್ಷಿ ಎಂದರು. ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ, ಶಾಸಕರ ಮಕ್ಕಳಿಗೆ ಟಿಕೆಟ್ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah election ಯಡಿಯೂರಪ್ಪ ಸುಳ್ಳುಗಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ