'ಯು.ಪಿ ಫಲಿತಾಂಶದಿಂದ ಪ್ರೇರಣೆ’15-03-2018

ಬೀದರ್: ಮತ್ತೆ ಪ್ರಾದೇಶಿಕ ಪಕ್ಷಗಳಿಗೆ ಜನ ಬಲ ಕೊಡುತ್ತಿದ್ದಾರೆ ಎಂಬುವುದಕ್ಕೆ ನಿನ್ನೆಯ ಫಲಿತಾಂಶ ದೊಡ್ಡ ಉದಾಹರಣೆ ಎಂದು, ಜೆಡಿಎಸ್ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರ್ ಉಪ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಜನರ ಆದೇಶ, ಇದು ನಿಜಕ್ಕೂ ಮೆಚ್ಚುವಂತ ಕೆಲಸ ಎಂದರು. ಒಂದೇ ವರ್ಷದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಆರ್ಶಿವಾದ ಮಾಡಿರುವುದು ನಮ್ಮ ಕರ್ನಾಟಕದಲ್ಲಿ ನಮಗೂ ಪ್ರೇರಣೆ, ಸ್ಪೂರ್ತಿಯಾಗಿದೆ ಎಂದರು. ಎಂಪಿ ಯಿಂದ ಸಿಎಂ ಆದ ಯೋಗಿ ಏನಾದರು ಬದಲಾವಣೆ ತರುತ್ತಾರೆ ಎಂದುಕೊಂಡಿದ್ದೆವು, ಆದರೆ ಒಂದೇ ವರ್ಷದಲ್ಲಿ ಯೋಗಿ ಇಲ್ಲ, ಯೋಗಿ ಕೆಲಸವೂ ಇಲ್ಲ ಎಂಬಂತಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Bandeppa Kashempur by election ಉದಾಹರಣೆ ಉಪ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ