ಸಿಎಂರನ್ನು ಭೇಟಿ ಮಾಡಿದ ಸ್ವಾಮೀಜಿಗಳ ನಿಯೋಗ

swamiji

15-03-2018

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಕುರಿತು ವೀರಶೈವ ಸ್ವಾಮೀಜಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಶಿ ಪೀಠದ ಶ್ರೀ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸುಮಾರು 50ಸ್ವಾಮೀಜಿಗಳ ನಿಯೋಗ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬಾರದೆಂದು, ಲಿಂಗಾಯತ ‌ಸ್ಥಾನಮಾನದ ತಜ್ಞರ ವರದಿಯನ್ನು ಕೇಂದ್ರಕ್ಕೆ ಶಿಫಾರಸು ‌ಮಾಡಬಾರದೆಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

ಸಭೆಯ ಬಳಿಕ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯತ-ಲಿಂಗಾಯತ ಎರಡು ಒಂದೇ, ತಜ್ಞರ ಸಮಿತಿ ಸರಿಯಾಗಿ ರಚನೆ ಆಗಿಲ್ಲ. ಸಮಿತಿಯ ಶಿಫಾರಸ್ಸನ್ನು ಸರ್ಕಾರ ತಿರಸ್ಕಾರ ಮಾಡಬೇಕು. ಅವಶ್ಯಕತೆ ಇದ್ದರೇ ಮತ್ತೊಂದು ಸಮಿತಿ‌ ಮಾಡಿ, ಎರಡು ಕಡೆಯ ಮುಖಂಡರನ್ನು ಈ ಸಮಿತಿಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದೇವೆ, ಒಂದು ವೇಳೆ ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 3000 ಸಾಮೀಜಿಗಳ ಪೈಕಿ 50 ಮಠಾಧೀಶರು ಮಾತ್ರ ಧರ್ಮ ಒಡೆಯಲು ಮುಂದಾಗಿದ್ದಾರೆ. ಮಿಕ್ಕ ಮಠಾಧೀಶರು ನಮ್ಮ ಧರ್ಮ ಒಡೆಯಬಾರದೆಂಬ ಅಭಿಪ್ರಾಯವಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

dingaleshwar swamiji lingayat ಶಿಫಾರಸು ತಜ್ಞರ ವರದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ