ಮಾಜಿ ಸಚಿವರ ಮಗನ ಮೇಲೆ ಹಲ್ಲೆ

Former minister

15-03-2018

ಕಲಬುರಗಿ: ಮಾಜಿ ಸಚಿವ ದಿವಂಗತ ಸಿ.ಗುರುನಾಥ್ ಅವರ ಮಗನ‌ ಮೇಲೆ ಸಂಬಂಧಿಕರಿಂದ ಮಾರಣಾಂತಿಕ‌ ಹಲ್ಲೆ ನಡೆದಿರುವ ಘಟನೆ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ನಡೆದಿದೆ. ಸಬಂಧಿಕರಾದ ಸತೀಶ್, ಅವಿನಾಶ್ ಸೇರಿದಂತೆ ಏಳೆಂಟು ಜನರಿಂದ ಸಿ.ರಘುನಾಥ್ ಮೇಲೆ ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಸಿ.ರಘುನಾಥ್ ತನ್ನ ಫೇಸ್‌ಬುಕ್ ವಾಲ್‌ನಲ್ಲಿ ‘ನನ್ನ ತಂದೆಯದು ಆತ್ಮಹತ್ಯೆಯಲ್ಲ ಕೊಲೆಯಾಗಿದೆ' ಎಂದು ಪೋಸ್ಟ್ ಹಾಕಿದ್ದರು. ಇದನ್ನು ನೋಡಿ ಕೆರಳಿದ ಸಂಬಂಧಿಕರು, ಪೋಸ್ಟ್ ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಎಚ್ಚರಿಕೆಗೆ ಬಗ್ಗದ ಸಿ.ರಘುನಾಥ್ ಇದ್ಯಾವುದನ್ನು ಕೇರ್ ಮಾಡಿಲ್ಲ, ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಸತೀಶ್ ಮತ್ತು ಅವಿನಾಶ್ ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದ ರಘುನಾಥ್ ಗಾಯಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರ ಒತ್ತಾಯದ ಮೇರೆಗೆ ಫೇಸ್‌ಬುಕ್‌ ಪೋಸ್ಟ್ ಅಳಿಸಿ ಹಾಕಿದ್ದಾರೆ. ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

C.gurunath C.Raghunath ಪೋಸ್ಟ್ ಮಾರಣಾಂತಿಕ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ