ವೆಲ್ಡಿಂಗ್ ಶಾಪ್ ನಲ್ಲಿ ವ್ಯಕ್ತಿ ನೇಣಿಗೆ ಶರಣು

Man suicide in his own welding shop

15-03-2018

ಶಿವಮೊಗ್ಗ: ತಾಲ್ಲೂಕಿನ ಸಂಗೊಳ್ಳಿ ರಾಯಣ್ಣ ರಸ್ತೆಯ ಮಾರುತಿ ವೆಲ್ಡಿಂಗ್ ಶಾಪ್ ನಲ್ಲಿ ವ್ಯಕ್ತಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬು ರೆಡ್ಡಿ (45) ನೇಣಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ವೆಲ್ಡಿಂಗ್ ಶಾಪ್ನ ಮಾಲೀಕ. ಬೆಳಿಗ್ಗೆ ಸುಮಾರು ಹೊತ್ತಾದರೂ ಅಂಗಡಿ ತೆರೆಯದ ಕಾರಣ ಅನುಮಾನಗೊಂಡ ಸ್ಥಳೀಯರು ಅಂಗಡಿ ಶೆಟರ್ ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೊಡ್ಡಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ