ತಹಶೀಲ್ದಾರ್ ಕಚೇರಿಯಲ್ಲಿ ಶಾಸಕ ಪ್ರತಿಭಟನೆ

Mla doddanagowda patil protest in tahsildar office

14-03-2018

ಕೊಪ್ಪಳ: ಫಲಾನುಭವಿಗಳಿಗೆ ನಿವೇಶನದ ಹಕ್ಕುಪತ್ರ ನೀಡದ ಹಿನ್ನೆಲೆ, ಜಿಲ್ಲೆಯ ಕುಷ್ಟಗಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲೇ ಶಾಸಕ ದೊಡ್ಡನಗೌಡ ಪಾಟೀಲ್ ಪ್ರತಿಭಟನೆ ಕುಳಿತಿದ್ದಾರೆ. ದೊಡ್ಡನಗೌಡ ಪಾಟೀಲ್ ಕುಷ್ಟಗಿ ಶಾಸಕ. ಕುಷ್ಟಗಿ ಪಟ್ಟಣದ 23ನೇ ವಾರ್ಡಿನ ತೆಗ್ಗಿನ ಓಣಿಯ 152  ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕಿತ್ತು, ಕಳೆದ ಹಲವಾರು ವರ್ಷಗಳಿಂದ ಹಕ್ಕು ಪತ್ರ ನೀಡಲು ಹಿಂದೇಟು ಹಾಕುತ್ತಿರುವ ತಾಲ್ಲೂಕು ಆಡಳಿತ ವಿರುದ್ಧ ಶಾಸಕ ಸಿಡಿದೆದ್ದಿದ್ದಾರೆ.

ಸುಮಾರು ನಾಲ್ಕು ಗಂಟೆಗಳಿಂದ ತಹಶೀಲ್ದಾರ ಕೊಠಡಿಯಲ್ಲಿಯೇ ಶಾಸಕ ಕುಳಿತಿದ್ದು, ಕುಷ್ಟಗಿಯಲ್ಲಿಯೇ ಇದ್ದರೂ ತಹಶೀಲ್ದಾರ ಗಂಗಪ್ಪ ಕಚೇರಿಗೆ ಬಂದಿಲ್ಲ. ಶಾಸಕ ದೊಡ್ಡನಗೌಡ ಪಾಟೀಲ್ ದೂರವಾಣಿ ಕರೆ ಮಾಡಿ ಕರೆದರೂ ಕಚೇರಿಗೆ ಬರದಿದ್ದು, ತಹಶೀಲ್ದಾರ ಕ್ರಮ ಖಂಡಿಸಿ ಪಾಟೀಲ್ ಪ್ರತಿಭಟಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಹಕ್ಕುಪತ್ರ ನೀಡಲು ಶಾಸಕ ದೊಡ್ಡನಗೌಡ ಪಾಟೀಲ್ ಪಟ್ಟು ಹಿಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

tahsildar doddanagowda patil ತೆಗ್ಗಿನ ಓಣಿ ಕೊಠಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ