ಬಿಜೆಪಿ ಯಾತ್ರೆಗೆ ಕುಮಾರ ಸ್ವಾಮಿ ತಿರುಗೇಟು

Nammondige kumaraswamy samvada: uttara kannada

14-03-2018

ಉತ್ತರ ಕನ್ನಡ: ಅನಂತ್ ಕುಮಾರ್ ಹೆಗಡೆ ಭಾಷೆ ಕೇಳಿದರೆ ಅವರು ಹಿಂದುವೇ ಅಲ್ಲ ಅನ್ನಿಸುತ್ತದೆ ಎಂದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ನಮ್ಮೊಂದಿಗೆ ಕುಮಾರಸ್ವಾಮಿ ಸಂವಾದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಹರಿಹಾಯ್ದರು. ಅನಂತ್ ಕುಮಾರ್ ಹೆಗಡೆಗೆ ಯಾವ ರೀತಿ ಮಾತಾಡಬೇಕೆನ್ನುವ ಅರಿವಿಲ್ಲ ಎಂದು ಕಿಡಿಕಾರಿದರು. ಬಿಜೆಪಿಯ ಪ್ರಚಾರಕ್ಕೆ ಯೋಗಿ ಆದಿತ್ಯ ನಾಥ್ ಬರೋದು ವಿಪರ್ಯಾಸ. ಉತ್ತರ ಪ್ರದೇಶದಲ್ಲೇ ಅಭಿವೃದ್ದಿ ಪರಿವರ್ತನೆ ಇಲ್ಲ. ಇಲ್ಲಿ ಬಂದು ಪರಿವರ್ತನೆ ಮಾಡೋದು ಏನು? ಎಂದು ಬಿಜೆಪಿಯ ಯಾತ್ರೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ನಮಸ್ಕಾರ ಮಾಡಿಲ್ಲ ಎಂದು ಕಲಬುರಗಿಯಲ್ಲಿ ರೈತನ ಮೇಲೆ ಹಲ್ಲೆ ಮಾಡಿರೋದು ಖಂಡನೀಯ. ಕಾಂಗ್ರೆಸ್ ಪಕ್ಷದಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ ಎಂದು ದೂರಿದರು. ರಾಜ್ಯದ ಜನರಿಗೆ, ಮಹಿಳೆಯರಿಗೆ ಭದ್ರತೆ ಇಲ್ಲ, ಸರ್ಕಾರದಂತೆ ಅಧಿಕಾರಿಗಳೂ ಸಹ ಜನರ ಮೇಲೆ ದಬ್ಬಾಳಿಕೆ ಮಾಡೋದು ಸರಿಯಲ್ಲ ಅಧಿಕಾರಿಗಳು ತಮ್ಮ ಕೆಲಸ ಮಾಡಲಿ ಅದು ಬಿಟ್ಟು ಸರ್ಕಾರದ ಏಜೆಂಟ್ ಆದರೆ ಮುಂದೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy Anant Kumar Hegde ಏಜೆಂಟ್ ದಬ್ಬಾಳಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ