ಸಿಎಂ ವಿರುದ್ಧ ಈಶ್ವರಪ್ಪ ಟೀಕೆ

siddaramaiah v/s K.S.eshwarappa

14-03-2018

ದಾವಣಗೆರೆ: ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ಯಡಿಯೂರಪ್ಪನವರನ್ನು ಬೈಯೋಕೆ ಸರ್ಕಾರದ ಹಣದಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಡವರು ಮನೆ ಕಟ್ಟಲು ಮರಳು‌ ಕೊಡುತ್ತಿಲ್ಲ, ಆದರೆ ಸಿಎಂ ಸಿದ್ದರಾಮಯ್ಯನವರು ಮರಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನೆಮ್ಮದಿಯಿಂದ ಬದುಕೋಕು ಬಿಡಲ್ಲ, ಜಾತಿ ಜಾತಿಗಳ ನಡುವೆ ಬೆಂಕಿ ಇಟ್ಟುಬಿಟ್ಟಿದ್ದೀರಿ, ರಾಜ್ಯದಲ್ಲಿ ಹಿಂದೂ ಯುವಕರ ಕಗ್ಗೊಲೆ ನಡೆಯುತ್ತಿದೆ ಈ ಅಮಾಯಕ ಯುವಕರು ಏನು ಮಾಡಿದ್ದಾರೆ. ನೀವೇನು ಕಣ್ಮುಚ್ಚಿ ಕುಳಿತಿದ್ದೀರಾ ಸಿದ್ದರಾಮಯ್ಯನವರೇ, ರಾಷ್ಟದ್ರೋಹಿಗಳಿಗೆ ಶಿಕ್ಷೆ ಕೊಡಿ, ಅಮಾಯಕರಿಗೆ ಮೋಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು. ರಾಷ್ಟ್ರದ ನಾಯಕರನ್ನು ಒಂದು ಮಾಡಿದ್ದಾರೆ ನಮ್ಮ ನರೇಂದ್ರ ಮೋದಿಯವರು, ಇವತ್ತಲ್ಲ ನಾಳೆ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

K.S.eshwarappa siddaramaiah ದ್ರೋಹಿ‌ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ